ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಜಿಲ್ಲಾ ವರ್ತಕರ ಸಂಘದ ಸಮಾವೇಶವನ್ನು ಡಾ. ನೀ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿದರು. ಡಾ. ಎಂ. ಉದಯಕುಮಾರ್ ಸರಳತ್ತಾಯ, ಐರೋಡಿ ಸಹನಶೀಲ ಪೈ, ಅರುಣಕಲಾ ಎಸ್. ರಾವ್, ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ. ಮಾಯಾ ಕಾಮತ್, ಸುರೇಶ್ ಪೈ, ಕರುಣಾ ಪೈ, ಮಡಿ ವಿಶ್ವನಾಥ್ ಖಾರ್ವಿ ಇತರರಿದ್ದರು.
* ಡಾ. ನೀ.ಬಿ. ವಿಜಯ ಬಲ್ಲಾಳ್ ಅಭಿಪ್ರಾಯ
* ಜಿಲ್ಲಾ ಸಂಘದ ಸಮಾವೇಶ ಉದ್ಘಾಟನೆ
ಉಡುಪಿ: ವರ್ತಕರು ಬಹಳ ಶ್ರಮಜೀವಿಗಳು. ತಮ್ಮ ವ್ಯಾಪಾರ, ವಹಿವಾಟಿನೊಂದಿಗೆ ಸಮಾಜ ಸೇವೆಯನ್ನೂ ಮಾಡುವುದು ಅವರ ಧರ್ಮ ವೃತ್ತಿಯಾಗಿದೆ. ವರ್ತಕರಲ್ಲಿ ಹೆಚ್ಚಿನವರು ಬಹಳ ನಿಷ್ಠೆಯಿಂದ ತಮ್ಮ ವೃತ್ತಿ ನಿಭಾಯಿಸುತ್ತಾರೆ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು.
ಉಡುಪಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲಾ ವರ್ತಕರ ಸಂಘದ 2026ನೇ ಸಾಲಿನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪರ್ಯಾಯ ಶೀರೂರು ಮಠದ ದಿವಾನ ಡಾ. ಎಂ. ಉದಯಕುಮಾರ್ ಸರಳತ್ತಾಯ ಮಾತನಾಡಿ ಶುಭಹಾರೈಸಿದರು.
ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಅವರು ಅಶಕ್ತರಿಗೆ ಸಹಾಯಧನ ಹಾಗೂ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿದರು. ಅಂತಾರಾಷ್ಟ್ರೀಯ ಖ್ಯಾತ ಕ್ರೀಡಾಪಟು ಅರುಣಕಲಾ ಎಸ್. ರಾವ್ ಅವರನ್ನು ಸನ್ಮಾನಿಸಲಾಯಿತು.
ನಗರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಸದಸ್ಯ ಬಾಲಕೃಷ್ಣ ಶೆಟ್ಟಿ. ಜಾನಪದ ಖ್ಯಾತ ಕಲಾವಿದೆ ಮಾಯಾ ಕಾಮತ್, ಸುರೇಶ್ ಪೈ, ಕರುಣಾ ಪೈ, ರಮ್ಯಾ ಮಲ್ಯ, ಭವಾನಿ ಪೈ, ಸೂರಜ್ ಪೈ, ಡಾಕಪ್ಪ, ವೆಂಕಟೇಶ್, ಸಂಘದ ಕಾರ್ಯದರ್ಶಿ ಪಾದೆಮಠ ನಾಗರಾಜ್ ಅಡಿಗ, ಪದಾಧಿಕಾರಿಗಳಾದ ಸತೀಶ್ ಕಿಣಿ, ಗೌರಿಶ್ರೀ, ಅನೂಷಾ ದೇವಾಡಿಗ, ಐಶ್ವರ್ಯಾ ಹಾಗೂ ಹಲವಾರು ವರ್ತಕರು ಉಪಸ್ಥಿತರಿದ್ದರು.
ಸಂಘದ ಸಂಪರ್ಕಾಧಿಕಾರಿ ಮಡಿ ವಿಶ್ವನಾಥ್ ಖಾರ್ವಿ ಕಾರ್ಯಕ್ರಮಿ ನಿರ್ವಹಿಸಿದರು.