ಹೋಟೆಲ್ ಮಾಲೀಕರ ಸಂಘದ ವತಿಯಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು
ಉಡುಪಿ :ಕೊಲ್ಲಿ ರಾಷ್ಟ್ರದಲ್ಲಿ ಯುದ್ಧದ ಕಾರಣಕ್ಕಾಗಿ ಪೆಟ್ರೋಲ್ ಮತ್ತು ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಕೇಂದ್ರ ಸರ್ಕಾರ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕುತಿದೆ. ಹೀಗಾಗಿ ಒಂದು ವಾರದೊಳಗೆ ವಾಣಿಜ್ಯ ಸಿಲಿಂಡರ್ ಸಮಸ್ಯೆ ಬಗ್ಗೆ ಹರಿಯುವ ವಿಶ್ವಾಸವಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾ ಹೋಟೆಲ್ ಮಾಲಕರ ಸಂಘದ ವತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಾಣಿಜ್ಯ ಬಳಕೆಗೆ 50,000 ಸಿಲಿಂಡರ್ ಹಾಗೂ 3,50,000 ಗೃಹಬಳಕೆ ಸಿಲಿಂಡರ್ ಬೇಕಾಗಿದ್ದು, ಪೂರೈಕೆ ಕೊರತೆಯಿಂದ ತಾತ್ಕಾಲಿಕ ಸಮಸ್ಯೆ ಉಂಟಾಗಿದೆ. ಸರ್ಕಾರ ಗೃಹಬಳಕೆ ಸಿಲಿಂಡರ್ಗಳಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿರುವುದರಿಂದ ಹೋಟೆಲ್ ಸಹಿತ ಇತರ ಉದ್ಯಮಕ್ಕೆ ಸ್ವಲ್ಪ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು ಕೇಂದ್ರ ಸಚಿವರ ಗಮನಕ್ಕೂ ತರಲಾಗುವುದು. ಜಗತ್ತಿಗೆ ಬಂದ ಸಮಸ್ಯೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ಖಾಸಗಿ ಗ್ಯಾಸ್ ಏಜೆನ್ಸಿ ಮಾಲಿಕ ದಿನೇಶ್ ಪುತ್ರನ್ ಮಾತನಾಡಿ, ಸೋಮವಾರದಿಂದ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ಅಡುಗೆ ಅನಿಲ ಕೊರತೆ ಭಯದಿಂದ ಜನರು 10 ಪಟ್ಟು ಹೆಚ್ಚು ಬುಕಿಂಗ್ ಪ್ರಯತ್ನ ಮಾಡಿದ್ದರಿಂದ ಸರ್ವರ್ ಸಮಸ್ಯೆ ಎದುರಾಗಿದೆ. ಪ್ರಸ್ತುತ ಗ್ಯಾಸ್ ಕಂಪನಿಗಳು ಶಾಲೆ, ಆಸ್ಪತ್ರೆ ಮತ್ತು ಇಂದಿರಾ ಕ್ಯಾಂಟೀನ್ಗೆ ಪೂರೈಕೆ ಆಗುತ್ತಿರುವ ಅಡುಗೆ ಅನಿಲದ ಬಗ್ಗೆ ಮಾಹಿತಿ ಕೇಳಿದ್ದಾರೆ. ಉಳಿದಂತೆ ಶೇ. 25ರಷ್ಟು ವಾಣಿಜ್ಯ ಬಳಕೆ ಸಿಲಿಂಡರ್ ಹೋಟೆಲ್ ಗಳಿಗೆ ಸರಬರಾಜಗುವ ಆಗುವ ಸಾಧ್ಯತೆ ಇದೆ ಎಂದರು.
ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗೇಶ್ ಭಟ್, ಪ್ರಮುಖರಾದ ವಿಠಲ್ ಪೈ, ಲಕ್ಷ್ಮಣ ವಾಗ್ಲೆ ಉಪಸ್ಥಿತರಿದ್ದರು.