ಶಾಸಕ ಯಶ್ಪಾಲ್​ ಸುವರ್ಣ ಮಾತನಾಡಿದರು.  
ಉಡುಪಿ

ಹೊಸ ಜಿಲ್ಲಾಸ್ಪತ್ರೆಗೆ ಹಳೆ ಉಪಕರಣಗಳ ಸ್ಥಳಾಂತರಕ್ಕೆ ವಿರೋಧ

ನೂತನವಾಗಿ ನಿರ್ಮಿಸಿದ 250 ಬೆಡ್​ಗಳ ನೂತನ ಜಿಲ್ಲಾಸ್ಪತ್ರೆಗೆ ಹಳೆ ಆಸ್ಪತ್ರೆಯಿಂದ ಮೇಜು, ಕುರ್ಚಿ, ಯಂತ್ರೋಪಗರಣಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸದೆ 30 ವರ್ಷ ಹಳೆ ವಸ್ತುಗಳನ್ನೇ ಬಳಸಿಕೊಂಡು ಕೇವಲ ನಾಮಫಲಕ ಬದಲಾಯಿಸುವ ಹುನ್ನಾರ.

ಉಡುಪಿ: ನೂತನವಾಗಿ ನಿರ್ಮಿಸಿದ 250 ಬೆಡ್​ಗಳ ನೂತನ ಜಿಲ್ಲಾಸ್ಪತ್ರೆಗೆ ಹಳೆ ಆಸ್ಪತ್ರೆಯಿಂದ ಮೇಜು, ಕುರ್ಚಿ, ಯಂತ್ರೋಪಗರಣಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸದೆ 30 ವರ್ಷ ಹಳೆ ವಸ್ತುಗಳನ್ನೇ ಬಳಸಿಕೊಂಡು ಕೇವಲ ನಾಮಫಲಕ ಬದಲಾಯಿಸುವ ಹುನ್ನಾರ ನಡೆಸಿದೆ. ಒಂದು ವಾರದೊಳಗೆ ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಮುನ್ಸೂಚನೆ ಅಥವಾ ಸಾರ್ವಜನಿಕರ ಪ್ರಕಟಣೆ ನೀಡದೆ ಒಳರೋಗಿ ವಿಭಾಗದಲ್ಲಿ ನೋಂದಣಿ ಸ್ಥಗಿತಗೊಳಿಸಿದ್ದಾರೆ. ಬಡವರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಸರ್ಕಾರವಿದ್ದಾಗ 250 ಬೆಡ್​ಗಳ ಆಸ್ಪತ್ರೆಗೆ ಸುಮಾರು 110 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. 2021ರಲ್ಲಿ ಆರಂಭವಾದ ಈ ಕಾಮಗಾರಿ ನಾನಾ ಕಾರಣಗಳಿಂದ ವಿಳಂಬವಾಗಿದೆ. ಇತ್ತೀಚೆಗೆ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್​ ಮಾರ್ಚ್​ ಒಳಗೆ ಅನುದಾನ ಬಿಡುಗಡೆ ಮಾಡಿ 3 ತಿಂಗಳೊಳಗೆ ಆಸ್ಪತ್ರೆಯನ್ನು ಸಜ್ಜುಗೊಳಿಸುವ ಭರವಸೆ ನೀಡಿದ್ದರು. ಆಸ್ಪತ್ರೆಯಲ್ಲಿ ಕ್ಲಿನಿಕಲ್​ ಮತ್ತು ನಾನ್​-ಕ್ಲಿನಿಕಲ್​ ಸಿಬ್ಬಂದಿ ನೇಮಕಾತಿ, ಸ್ಕಾ$ನಿಂಗ್​, ಎಕ್ಸ್​ರೇ, ಐಸಿಯು ಹಾಗೂ ವೆಂಟಿಲೇಟರ್​ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದರು.

ಈಗ ತರಾತುರಿಯಲ್ಲಿ ಹಳೆ ಆಸ್ಪತ್ರೆಯಿಂದ ಎಲ್ಲಾ ವಸ್ತುಗಳನ್ನು ಸ್ಥಳಾಂತರಿಸಲಾಗುತ್ತಿದೆ. ಒಂದು ವಾರದೊಳಗೆ ಸಚಿವರು ಮತ್ತು ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲ್ಲೆಯ ಐದು ಶಾಸಕರ ನೇತೃತ್ವದಲ್ಲಿ ಬಡ ಜನರ ಪರವಾಗಿ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು.