ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಎಚ್.ಅಶೋಕ್ ಅವರನ್ನು ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು. ಪ್ರಕಾಶ್ ಪೂಜಾರಿ ಬನ್ನಾಡಿ, ಶಿವರಾಜ್, ಚಂದ್ರಶೇಖರ್ ಮೆಂಡನ್, ದಯಾನಂದ್ ಆಚಾರ್, ಉದಯ್ ಹೆಗ್ಡೆ, ಸುರೇಶ್ ಆಚಾರ್, ಪ್ರಕಾಶ್ ಹಂದಟ್ಟು ಇದ್ದರು.
* ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಅನಿಸಿಕೆ
* ಜಿಲ್ಲಾಸ್ಪತ್ರೆ ಸರ್ಜನ್ ಡಾ. ಎಚ್.ಅಶೋಕ್ಗೆ ಸನ್ಮಾನ
ಉಡುಪಿ: ವೈದ್ಯಕೀಯ ಸೇವೆ ಕೇವಲ ವೃತ್ತಿಯಲ್ಲ. ಅದು ಮಾನವೀಯ ಶ್ರೇಷ್ಠ ಸೇವೆಯಾಗಿದೆ. 'ವೈದ್ಯೋ ನಾರಾಯಣೋ ಹರಿ:' ಎಂಬ ಮಾತಿನಂತೆ ವೈದ್ಯ ಸೇವೆಯಿಂದ ಜನರ ಜೀವ ಉಳಿಸುವ ಮೂಲಕ ದೇವರಿಗೆ ಸಮಾನರಾಗಿರುತ್ತಾರೆ. ನಿಜಕ್ಕೂ ವೈದ್ಯರು ಜೀವದಾತರು ಎಂದು ರೋಟರಿ ಕ್ಲಬ್ ಕೋಟ ಬ್ರಿಗೇಡ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಬನ್ನಾಡಿ ಅನಿಸಿಕೆ ವ್ಯಕ್ತಪಡಿಸಿದರು.
ವೈದ್ಯರ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಎಚ್.ಅಶೋಕ್ ಅವರನ್ನು ಗೌರವಿಸಿ ಮಾತನಾಡಿದರು.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಾ. ಅಶೋಕ್ ಅವರ ನಿಸ್ವಾರ್ಥ ಸೇವೆ ಹಾಗೂ ಆಡಳಿತಾತ್ಮಕ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದರು.
ಕ್ಲಬ್ನ ಕಾರ್ಯದರ್ಶಿ ಶಿವರಾಜ್, ಸಲಹೆಗಾರ ಚಂದ್ರಶೇಖರ್ ಮೆಂಡನ್, ವಲಯ ಸೇನಾನಿ ದಯಾನಂದ ಆಚಾರ್, ಸದಸ್ಯರಾದ ಉದಯ್ ಹೆಗ್ಡೆ, ಸುರೇಶ್ ಆಚಾರ್, ಪ್ರಕಾಶ್ ಹಂದಟ್ಟು ಉಪಸ್ಥಿತರಿದ್ದರು.