'ಉಡುಪಿ ದಾಂಡಿಯಾ' ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್​ಅನ್ನು ಯಶಪಾಲ್​ ಸುವರ್ಣ ಬಿಡುಗಡೆ ಮಾಡಿದರು. ಪ.ವಸಂತ್​ ಭಟ್​, ಕೆ. ರಾಘವೇಂದ್ರ ಕಿಣಿ, ಗಿರೀಶ್​ ಅಂಚನ್​, ಪ್ರದೀಪ್​ ಶೆಟ್ಟಿ, ಎಂ.ವಲ್ಲಭ ಭಟ್​, ಮಂಜುನಾಥ್​ ಹೆಬ್ಬಾರ್​ ಇದ್ದರು. 
ಉಡುಪಿ

'ಉಡುಪಿ ದಾಂಡಿಯಾ' ನೃತ್ಯ ಅ.17ಕ್ಕೆ

* ಪೋಸ್ಟರ್​ ಬಿಡುಗಡೆ ಮಾಡಿದ ಶಾಸಕ ಯಶ್​ಪಾಲ್​

ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಯುವ ಘಟಕದ ನೇತೃತ್ವದಲ್ಲಿ ಅ.17ರಂದು ಸಾಯಂಕಾಲ 6 ಗಂಟೆಯಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 9ನೇ ವರ್ಷದ 'ಉಡುಪಿ ದಾಂಡಿಯಾ' ನಡೆಯಲಿದೆ.

ತನ್ನಮಿತ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್​ಅನ್ನು ಶಾಸಕ ಯಶಪಾಲ್​ ಸುವರ್ಣ ಸೋಮವಾರ (ಸೆ.28) ಬಿಡುಗಡೆ ಮಾಡಿದರು.

ಸಮಿತಿ ಅಧ್ಯಕ್ಷ ಪ.ವಸಂತ್​ ಭಟ್​, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವಜ್ರಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್​ ಅಂಚನ್​, ಸಮಿತಿಯ ಕೋಶಾಧಿಕಾರಿ ಎಂ.ವಲ್ಲಭ ಭಟ್​, ವಜ್ರಮಹೋತ್ಸವ ಸಮಿತಿಯ ಕೋಶಾಧಿಕಾರಿ ಮಂಜುನಾಥ್​ ಹೆಬ್ಬಾರ್​, ಯುವ ಘಟಕದ ಗೌರವಾಧ್ಯಕ್ಷ ಅಶ್ವತ್ಥ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶ್ರೇಯಸ್​ ದೇವಾಡಿಗ ಉಪಸ್ಥಿತರಿದ್ದರು.

ಉಡುಪಿ ದಾಂಡಿಯಾದಲ್ಲಿ ವಿಶೇಷವಾದ ತಿಂಡಿ-ತಿನಿಸುಗಳ ಆಹಾರ ಮಳಿಗೆ, ಸೆಲ್ಫಿ ಪಾಯಿಂಟ್​ ಇರಲಿದೆ. ಇದರ ಉದ್ಘಾಟನೆಯನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಉದ್ಘಾಟಿಸಲಿದ್ದಾರೆ.
> ಪ್ರದೀಪ್​ ಶೆಟ್ಟಿ. ಗಣೇಶೋತ್ಸವ ಸಮಿತಿಯ ಯುವ ಘಟಕದ ಅಧ್ಯಕ್ಷ.