ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಜಯಪ್ರಕಾಶ್​ ಹೆಗ್ಡೆ ಮಾತನಾಡಿದರು. 
ಉಡುಪಿ

ಎಸ್​ಐಆರ್​ ಬಗ್ಗೆ ಯುವಜನರಲ್ಲಿ ಜಾಗೃತಿ ಅಗತ್ಯ: ಜಯಪ್ರಕಾಶ್​ ಹೆಗ್ಡೆ

ಉಡುಪಿ: ದೆಹಲಿಯಲ್ಲಿ ಜೆನ್​ ಜೀ ಯುವಕರು ಪ್ರತಿಭಟನೆ ನಡೆಸಿದ ರೀತಿಯಲ್ಲಿ ಎಸ್​ಐಆರ್​ ಬಗ್ಗೆಯೂ ಯುವಜನರೂ ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್​ ಹೆಗ್ಡೆ ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ವತಿಯಿಂದ ವೋಟ್​ ಚೋರಿ - ದೇಶ್​ ಬಚಾವೋ ಅಭಿಯಾನದ ಅಂಗವಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಮಲೀಲಾದಲ್ಲಿ ನಡೆದ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಜ್ಞಾನೇಶ್​ ಕುಮಾರ್​ ಚುನಾವಣಾ ಆಯುಕ್ತರಾಗಿದ್ದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್​ ಗೆಲ್ಲುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ವಿನಯಕುಮಾರ್​ ಸೊರಕೆ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿಮಾರ್ಣವಾಗಿದ್ದು, ಎಸ್​ಐಆರ್​ ಪ್ರಕ್ರಿಯೆಯ ಮೂಲಕ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪಶ್ಚಿಮ ಬಂಗಾಳ ಮತ್ತು ಬಿಹಾರ ಚುನಾವಣೆಗಳ ಬಳಿಕ ದೇಶದ ಜನರು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಎಸ್​ಐಆರ್​ ಮೂಲಕ ಜನರ ಮತದಾನದ ಹಕ್ಕನ್ನು ಕಸಿದುಕೊಂಡು ಬೀಗುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.

ಧಾರ್ಮಿಕ ಪರಿಷತ್​ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಹಾಗೂ ಸಾಹಿತಿ ಗಣನಾಥ ಎಕ್ಕಾರು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲ್​, ಕರಾವಳಿ ಪ್ರಾಧಿಕಾರದ ಎಂ.ಎ. ಗಫೂರ್​, ಮೂಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್​, ನಿಕಟಪೂರ್ವ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಗೋಪಾಲ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ದಿನಕರ ಹೇರೂರು, ಪ್ರಶಾಂತ್​ ಜತ್ತನ್ನ, ಪ್ರಸಾದ್​ ರಾಜ್​ ಕಾಂಚನ್​, ರಾಜು ಪೂಜಾರಿ, ಮುನಿಯಾಲು ಉದಯಕುಮಾರ್​ ಶೆಟ್ಟಿ, ದಿನೇಶ್​ ಹೆಗ್ಡೆ ಮೊಳಹಳ್ಳಿ, ಬ್ಲಾಕ್​ ಅಧ್ಯಕ್ಷರಾದ ರಮೇಶ್​ ಕಾಂಚನ್​, ದಿನೇಶ್​ ಕುಲಾಲ್​, ಗೋಪಿನಾಥ್​ ಭಟ್​, ಸದಾನಂದ ಶೆಟ್ಟಿ, ತಿಮ್ಮ ಪೂಜಾರಿ, ರಾಘವೇಂದ್ರ ಶೆಟ್ಟಿ ಕರ್ಜೆ, ಹರಿಪ್ರಸಾದ್​ ಶೆಟ್ಟಿ, ವೈ. ಸುಕುಮಾರ್​, ಅರವಿಂದ ಪೂಜಾರಿ, ಪ್ರದಿಪ್​ ಕುಮಾರ್​, ದಿನೇಶ್​ ಪುತ್ರನ್​, ಬಿ. ನರಸಿಂಹಮೂರ್ತಿ, ಹಿರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಭಾಸ್ಕರರಾವ್​ ಕಿದಿಯೂರು, ಪ್ರಖ್ಯಾತ್​ ಶೆಟ್ಟಿ ಉಪಸ್ಥಿತರಿದ್ದರು.

ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್​ ಕಿಣಿ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ವಂದಿಸಿದರು.