ಆಸರೆ ಮಣಿಪಾಲದ ಅಧ್ಯಕ್ಷ ಎಸ್​. ಜೈವಿಠ್ಠಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ಮೇ 23ರಿಂದ ವಿಶೇಷ ಮಕ್ಕಳ ಪೋಷಕರ ಸಮ್ಮೇಳನ

ಉಡುಪಿ: ಪರಿವಾರ್​ ಎನ್​ಸಿಪಿಒ, ಹೈದರಾಬಾದ್​ನ ಮೌಲಾನಾ ಆಜಾದ್​ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ಹಾಗೂ ಉಡುಪಿ ಜಿಲ್ಲಾ ಪೋಷಕರ ಸಂಘ ಮತ್ತು ಆಸರೆ ಸಂಸ್ಥೆ ಆಶ್ರಯದಲ್ಲಿ ಮೇ 23 ಮತ್ತು 24 ರಂದು ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಡಾ. ಟಿ.ಎಂ.ಎ. ಪೈ ಫೌಂಡೇಶನ್​ನ ಶಾರದಾ ವಸತಿ ಶಾಲೆಯಲ್ಲಿ ಕರ್ನಾಟಕ, ಕೇರಳ, ತೆಲಂಗಾಣ, ಗೋವಾ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಒಳಗೊಂಡ ಪ್ರಾದೇಶಿಕ ವಿಶೇಷ ಮಕ್ಕಳ ಪೋಷಕರ ಸಮ್ಮೇಳನ- ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ನಿರಂಜನ್​ ಭಟ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 23ರಂದು ಬೆಳಿಗ್ಗೆ 10:30ಕ್ಕೆ ಶಾಸಕ ಯಶ್​ಪಾಲ್​ ಸುವರ್ಣ ಉದ್ಘಾಟಿಸಲಿದ್ದಾರೆ. ಮಾಹೆ ಮಣಿಪಾಲದ ಎಂಸಿಎಚ್​ಪಿ ಡೀನ್​ ಪ್ರೊ. ಡಾ. ಅರುಣ್​ ಮಯ್ಯ ಹಾಗೂ ಉಡುಪಿ ಶಾರದಾ ವಸತಿ ಶಾಲೆಯ ನಿರ್ದೇಶಕ ವಿದ್ಯಾವಂತ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಪ್ರತಿಕ್​ ಬಾಯಲ್​, ರೋಟರಿ ಜಿಲ್ಲಾ ನಿಯುಕ್ತ ಗವರ್ನರ್​ ಬಿ.ಎಂ. ಭಟ್​, ಅರ್ಚನಾ ಟ್ರಸ್ಟ್​ನ ಟ್ರಸ್ಟಿ ಡಾ. ಪದ್ಮರಾಜ್​ ಹೆಗ್ಡೆ, ಆಸರೆ ಸಂಸ್ಥೆಯ ಸಂಚಾಲಕ ಶ್ರೀಧರ್​ ಕೆ. ರಾವ್​, ಉಡುಪಿ ರೆಡ್​ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ್​ ಎಕ್ಕಾರ್​, ಉಡುಪಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ, ಹೈದರಾಬಾದ್​ನ ವಿಶ್ವವಿದ್ಯಾಲಯದ ದಿವ್ಯಾಂಗ ಸಾರಥಿ ಯೋಜನೆಯ ಸಹ-ಸಂಶೋಧಕಿ ಡಾ. ಉಮ್ಮೆ ಸಲ್ಮಾ ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಪರಿವಾರ್​ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಸುದೀಪ್​ ಗೋಯಲ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಆಸರೆ ಮಣಿಪಾಲದ ಅಧ್ಯಕ್ಷ ಎಸ್​. ಜೈವಿಠ್ಠಲ್​, ಪ್ರಮುಖರಾದ ವಿಜಯಲಕ್ಷಿ, ಲತಾ, ರಮೇಶ್​, ಕೀರ್ತೇಶ್​ ಉಪಸ್ಥಿತರಿದ್ದರು.