ಉಡುಪಿ ಮಣಿಪಾಲದಲ್ಲಿ ಮೋದಿ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಯಶ್ಪಾಲ್ ಸುವರ್ಣ ಮಾತನಾಡಿದರು. ಕುತ್ಯಾರು ನವೀನ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಮಟ್ಟಾರು ರತ್ನಾಕರ್ ಹೆಗ್ಡೆ, ಉದಯಕುಮಾರ್ ಶೆಟ್ಟಿ ಕಿದಿಯೂರು, ಪ್ರಭಾಕರ್ ಪೂಜಾರಿ, ಕಿರಣಕುಮಾರ್ ಬೈಲೂರು, ದಿನೇಶ್ ಅಮೀನ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಇದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಮತ
*ಜನ್ಮದಿನದ ನಿಮಿತ್ತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ
ಉಡುಪಿ: ದೇಶದ ಪ್ರಧಾನಿಯಾಗಿ ಕಳೆದ 12 ವರ್ಷದಿಂದ ದಕ್ಷ ನಾಯಕತ್ವದ ಮೂಲಕ ಭಾರತದ ಸಮಗ್ರ ಪ್ರಗತಿಗೆ ನರೇಂದ್ರ ಮೋದಿ ಅವರು ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಅವರ ದೃಢ ಸಂಕಲ್ಪ, ಸಮರ್ಥ ನಾಯಕತ್ವ ಇಂದು ವಿಶ್ವಕ್ಕೇ ಮಾದರಿಯಾಗಿದೆ. ಇಂದಿನ ರಕ್ತದಾನ ಶಿಬಿರದಲ್ಲಿ ಉಡುಪಿಯ 500ಕ್ಕೂ ಅಧಿಕ ಯುವಜನತೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿರುವುದು ನರೇಂದ್ರ ಮೋದಿ ಕುರಿತಾಗಿ ಇರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಶ್ಲಾಘಿಸಿದರು.
ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ಉಡುಪಿ ನಗರ ಬಿಜೆಪಿ ವತಿಯಿಂದ ಗುರುವಾರ (ಸೆ.17) ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಶುಭ ಹಾರೈಸಿದರು. ರಕ್ತದಾನ ಶಿಬಿರದಲ್ಲಿ ಕಸ್ತೂರ್ಬಾ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಸಹಯೋಗದಲ್ಲಿ 518 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಪಕ್ಷದ ಮುಖಂಡರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಉದಯಕುಮಾರ್ ಶೆಟ್ಟಿ ಕಿದಿಯೂರು, ಪ್ರಭಾಕರ್ ಪೂಜಾರಿ, ಕಿರಣಕುಮಾರ್ ಬೈಲೂರು, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರ ಬಿಜೆಪಿಯ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.