ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಗೌರವಾಧ್ಯಕ್ಷ, ಅಧ್ಯಕ್ಷರಾಗಿ ಆಯ್ಕೆಯಾದ ಯು.ವಿಶ್ವನಾಥ್ ಶೆಣೈ, ಪ್ರೊ.ಶಂಕರ್.
* ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಮಹಾಸಭೆ
ಉಡುಪಿ: ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಗೌರವಾಧ್ಯಕ್ಷರಾಗಿ ಯು. ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನ: ಆಯ್ಕೆಯಾದರು. ಉಡುಪಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಮಹಾಸಭೆಯಲ್ಲಿ ಸಂಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ್ ಹೆಬ್ಬಾರ್, ಪ್ರಭಾವತಿ ವಿ. ಶೆಣೈ, ಸಂಧ್ಯಾ ಶೆಣೈ, ಜೀವನ್ ರಾಮ್ ಸುಳ್ಯ, ವಿಘ್ನೇಶ್ವರ್ ಅಡಿಗ, ಆಸ್ಟ್ರೊ ಮೋಹನ್, ಡಾ. ಭಾರ್ಗವಿ ಐತಾಳ್, ಮನೋಹರ್ ನಾಯಕ್, ಮಧುಸೂದನ್ ಹೇರೂರು, ಸುಗುಣಾ ಸುವರ್ಣ, ಜನಾರ್ದನ್ ಕೊಡವೂರು, ಉಮೇಶ್ ನಾಯಕ್ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು, ರಾಜಗೋಪಾಲ್ ಬಲ್ಲಾಳ, ಡಾ. ಸುರೇಶ್ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಎಂ.ಎಸ್. ಭಟ್, ಶಂಕರ ನಾರಾಯಣ ಕೊಡಂಚ, ಮನೋಹರ್ ಶೆಟ್ಟಿ ತೊನ್ಸೆ ನೇಮಕಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್, ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು, ಸಂಚಾಲಕರಾಗಿ ರವಿರಾಜ್ ಎಚ್.ಪಿ. ಆಯ್ಕೆಗೊಂಡರು.
ಸಂಸ್ಥೆಯ ಮಹಾಪೋಷಕರಾಗಿ ಡಾ. ಹರೀಶ್ಚಂದ್ರ, ಸಿ.ಎಸ್. ರಾವ್, ನಾರಾಯಣ ಮಡಿ, ಹಫೀಜ್ ರೆಹಮಾನ್, ವಿಜಯಕುಮಾರ್ ನೇಮಕಗೊಂಡರು.
ವಿಶೇಷ ಆಹ್ವಾನಿತರಾಗಿ ಶಂಕರಿ ರಾಮ್ ಭಟ್, ವಿವೇಕಾನಂದ ಎನ್., ಬಾಲಕೃಷ್ಣ ಮುದ್ದೋಡಿ, ಶಾಮಸುಂದರ್, ಕೃಷ್ಣರಾಜ ತಂತ್ರಿ, ಸೋಮನಾಥ್ ಚಿಟ್ಪಾಡಿ, ವಿದ್ಯಾ ಶಾಮಸುಂದರ್, ಸುಮಿತ್ರಾ ಕೆರೆಮಠ, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ, ಗಣೇಶ್ ಬ್ರಹ್ಮಾವರ, ರಾಘವೇಂದ್ರ ಅಜೇಕಾರ್, ರಂಜಿನಿ ವಸಂತ್, ಅನಂತ ಶೆಣೈ, ವಸಂತ್, ನಂದಾ ಪೇಟ್ಕರ್, ಶೃತಿ ಕಾಶಿ, ಅಮೃತಾ ಆರ್.ಕೆ., ದಯಾನಂದ್, ಚಂದ್ರಕಾಂತ್, ರಾಘವೇಂದ್ರ ಪ್ರಭು ಕರ್ವಾಲು, ಸತೀಶ್ ಕೊಡವೂರು, ಶಶಿಕಾಂತ್ ಶೆಟ್ಟಿ, ದೀಪಾ ಕರ್ಕಿ, ಸುಭೋದ್ ರಾವ್, ನಿತಿನ್ ಕುಕ್ಕಿಕಟ್ಟೆ, ರೇಖಾ ಪೈ, ಆಯ್ಕೆಯಾಗಿರುತ್ತಾರೆ.