ರೈಲು ಡಿಕ್ಕಿಯಾಗಿ ಇಬ್ಬರು ಸಾವು
ಕಾಸರಗೋಡು: ಮಂಜೇಶ್ವರ ರೈಲು ನಿಲ್ದಾಣದಲ್ಲಿ ಎರಡು ಪ್ರತ್ಯೇಕ ರೈಲು ಡಿಕ್ಕಿ ಪ್ರಕರಣದಲ್ಲಿ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೂಲತಃ ಮೊಗ್ರಾಲ್ ಪುತ್ತೂರು ಕೋಟೆಕುಂಜ ನಿವಾಸಿ, ಪ್ರಸಕ್ತ ಮಂಜೇಶ್ವರ ಹೊಸಬೆಟ್ಟು ಸ್ಫೂರ್ತಿನಗರದಲ್ಲಿ ವಾಸಿಸುತ್ತಿದ್ದ ಉಮೇಶ್ (40) ಹಾಗೂ ಕೀರ್ತೇಶ್ವರ ದೇವಸ್ಥಾನ ಸನಿಹದ ದಾಮೋದರ-ಲೀಲಾವತಿ ದಂಪತಿ ಪುತ್ರ ಮನೀಶ್(18) ಮೃತಪಟ್ಟವರು. ಎರಡೂ ಮೃತದೇಹ ತಾಸುಗಳ ಅಂತರದಲ್ಲಿ ಪತ್ತೆಯಾಗಿದೆ.
ಕೂಲಿ ಕಾರ್ಮಿಕನಾಗಿರುವ ಉಮೇಶ್ ಮೃತದೇಹ ರಾತ್ರಿ ಮಂಗಳೂರು ಭಾಗಕ್ಕೆ ಗೂಡ್ಸ್ ರೈಲು ಸಂಚರಿಸಿದ ಕೆಲ ಹೊತ್ತಿನಲ್ಲಿ ಹಳಿಯಲ್ಲಿ ಪತ್ತೆಯಾಗಿದೆ. ಕೆಲವೇ ತಾಸುಗಳಲ್ಲಿ ಮನೀಶ್ ಮೃತದೇಹ ಪತ್ತೆಯಾಗಿದೆ. ಅವರಿಗೆ ಮಂಗಳೂರಿನಿಂದ ಕಣ್ಣೂರು ಭಾಗಕ್ಕೆ ಸಂಚರಿಸಿದ ಗೂಡ್ಸ್ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ಇಬ್ಬರೂ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಮನೀಶ್ ಫ್ಯಾಬ್ರಿಕೇಶನ್ ಕೆಲಸ ನಿರ್ವಹಿಸುತ್ತಿದ್ದರು. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.