Death 
ಉಡುಪಿ

ಇಲಿ ಪಾಷಾಣ ಸೇವಿಸಿದ್ದ ಇಬ್ಬರು ಗೃಹಿಣಿಯರು ಸಾವು

ಕಾಸರಗೋಡು: ವೆಳ್ಳರಿಕುಂಡು ಹಾಗೂ ಪಡನ್ನಕ್ಕಾಡ್‌ನಲ್ಲಿ ಎರಡು ಪ್ರತ್ಯೇಕ ಟನೆಯಲ್ಲಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗೃಹಿಣಿಯರು ಮೃತಪಟ್ಟಿದ್ದಾರೆ. ಕಾಞಂಗಾಡಿನ ಪಡನ್ನಕ್ಕಾಡ್ ನಿವಾಸಿ ಎಂ.ಕೆ ಅಬ್ದುಲ್ ರಹವಾನ್ ಎಂಬವರ ಪುತ್ರಿ ಎಂ.ಕೆ.ತಾಹಿರಾ (35) ಹಾಗೂ ವೆಳ್ಳರಿಕ್ಕುಂಡ್ ಆನಮಂಜಲ್ ನಿವಾಸಿ ಸತೀಶ ಎಂಬವರ ಪತ್ನಿ ದೀಪಾ (23) ಮೃತರು.
ಜು.28ರಂದು ಮನೆಯಲ್ಲಿ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ತಾಹಿರಾ ಅವರನ್ನು ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಹೊಸದುರ್ಗ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಐದು ದಿನಗಳ ಹಿಂದೆ ಪತಿ ಮನೆಯಲ್ಲಿ ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ವೆಳ್ಳರಿಕ್ಕುಂಡ್ ಆನಮಞಲ್ ನಿವಾಸಿ ಸತೀಶ ಎಂಬವರ ಪತ್ನಿ ದೀಪಾ ಅವರನ್ನು ಪೆರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಕೋಯಿಕ್ಕೋಡಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ.