ಕುಸಿದು ಬಿದ್ದಿರುವ ಮನೆ ಸಮೀಪದ ಆವರಣಗೋಡೆ ಮತ್ತು ಮೃತಪಟ್ಟ ಸಹೋದರರಾದ ಮುಸಾಮ್ಮಿಲ್ ಹಾಗೂ ಮುನ್‌ಸೀರ್. 
ಉಡುಪಿ

ಆವರಣ ಗೋಡೆ ಕುಸಿದು ಸಹೋದರರಿಬ್ಬರ ದಾರುಣ ಸಾವು

ಇಂದಿರಾ ಎನ್ ಕೆ
ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಪೆಲಮರ್ವ ಎಂಬಲ್ಲಿ ಮನೆ ಸಮೀಪದ ಆವರಣ ಗೋಡೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದಾನೆ.
ಇಲ್ಲಿನ ನಿವಾಸಿ ಅಬೂಬಕ್ಕರ್ ಅವರ ಮಕ್ಕಳಾದ ಮುಸಾಮ್ಮಿಲ್(14) ಹಾಗೂ ಮುನ್‌ಸೀರ್(9)ಮೃತಪಟ್ಟವರು. ಮೃತದೇಹಗಳನ್ನು ಮುಳ್ಳೇರಿಯದ ಸಹಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಗಾಯಾಳು ಮಹಮ್ಮದ್ ವಾಹ್‌ಶಿನ್(14) ಎಂಬಾತನನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗಷ್ಟೇ ಗೃಹಪ್ರವೇಶ ನಡೆದಿರುವ ಮನೆಯ ಸಮೀಪ ಭಾರಿ ಪ್ರಮಾಣದ ಮಣ್ಣಿನ ದಿಣ್ಣೆ ಕುಸಿದು ಬಿದ್ದಿದೆ. ಈ ಸಂದರ್ಭ ಆಟವಾಡುತ್ತಿದ್ದ ಮೂರು ಮಂದಿ ಮಕ್ಕಳು ಮಣ್ಣಿನಡಿ ಸಿಲುಕಿಕೊಂಡಿದ್ದರು. ಸ್ಥಳೀಯರು ಹಾಗೂ ಆದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಣ್ಣಿನೊಳಗಿಂದ ಮಕ್ಕಳನ್ನು ಹೊರತೆಗಿದ್ದು, ಈ ಪೈಕಿ ಮುಸಾಮ್ಮಿಲ್ ಹಾಗೂ ಮುನ್ಸೀರ್ ಮೃತಪಟ್ಟಿದ್ದರು.