ಬಂಧಿತ ಆರೋಪಿಗಳು. 
ಉಡುಪಿ

ಗಾಂಜಾ ಸಾಗಾಟ ಆರೋಪಿಗಳಿಬ್ಬರ ಬಂಧನ

ಇಂದಿರಾ ಎನ್ ಕೆ
ಕುಂಬಳೆ: ಆಪರೇಷನ್ ತೂಫಾನ್ ಅಂಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸಿ 30 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹೊಸದುರ್ಗ ಠಾಣಾ ವ್ಯಾಪ್ತಿಯ ಲಾಲಾ ಕಬೀರ್ ಮತ್ತು ಮೊಹಮ್ಮದ್ ನಿಹಾಲ್ ಬಂಧಿತರು.

ಶನಿವಾರ ಬೆಳಗ್ಗೆ ಕುಂಬಳೆ ರಾ.ಹೆ. ಆರಿಕ್ಕಾಡಿ ಟೋಲ್ ಪ್ಲಾಜಾ ಬಳಿ ನಡೆಸಿದ ವಾಹನ ತಪಾಸಣೆ ವೇಳೆ ಪೊಲೀಸರು ಹೋಂಡಾ ಸಿಟಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ 30 ಕೆಜಿ ಗಾಂಜಾ ಪತ್ತೆಯಾಗಿದೆ. ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ.ಜೋಸ್ ಮತ್ತು ಎಸ್‌ಐ ಕೆ.ಪಿ.ಗಣೇಶನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಆರೋಪಿಗಳ ಪೈಕಿ ಲಾಲಾ ಕಬೀರ್ ದರೋಡೆ, ಅಪಹರಣ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕೇರಳ ಮತ್ತು ಕರ್ನಾಟಕದಲ್ಲಿ ಈತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಮೈಸೂರಿನ ಜೈಲಿನಲ್ಲಿದ್ದ ಲಾಲಾ ಕಬೀರ್ ಇತ್ತೀಚೆಗೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.