Arrest 
ಉಡುಪಿ

ಮಟ್ಕಾ ನಿರತ ಇಬ್ಬರ ಬಂಧನ

ಇಂದಿರಾ ಎನ್ ಕೆ

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಅಂಗಡಿಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಗಳಾದ ಉರುವಾಲು ಗ್ರಾಮದ ಕಾರ್ಯತಡ್ಕ ನಿವಾಸಿ ಉಮೇಶ್ ಪೂಜಾರಿ(45), ಕೋಡಿಂಬಾಡಿ ಗ್ರಾಮದ ಶಾಂತಿನಗರದ ಕಿನ್ನಿತ್ತಪಲ್ಕೆ ನಿವಾಸಿ ಸತ್ಯನಾರಾಯಣ ಪ್ರಸಾದ್(49) ಬಂಧಿತರು.

ಕೇರಳ ರಾಜ್ಯದ ಬಂಪರ್ ಬಹುಮಾನದ ಲಾಟರಿ ಟಿಕೆಟ್‌ನ ಕೊನೆಯ ಮೂರು ಮತ್ತು ಎರಡು ಅಂಕೆಗಳಿಗೆ ಗ್ರಾಹಕರಿಂದ ಹಣ ಪಡೆಯಲಾಗುತ್ತಿತ್ತು. ಮೂರಂಕೆಯ ನಂಬರ್ ಬಂದರೆ 20 ರೂ.ಗೆ 12 ಸಾವಿರ ರೂಪಾಯಿ, ಎರಂಡಕೆಯ ನಂಬರ್ ಬಂದರೆ 1,600 ರೂ. ಕೊಡಲಾಗುತ್ತಿತ್ತು. ಈ ಬಗ್ಗೆ ಖಚಿತ ಸುಳಿವು ಪಡೆದು ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಸುತೇಶ್ ನೇತೃತ್ವದಲ್ಲಿ ಕಾರ್ಚಾರಣೆ ನಡೆಸಲಾಯಿತು. ರೂವಾರಿಗಳಾದ ಇನ್ನಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.