ಕುಂದಾಪುರ: ಎಸ್‌ಐಆರ್ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗುಲ್ವಾಡಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಪ್ರಕಾಶ ನಾಯ್ಕ ಅವರಿಗೆ ಅವಾಚ್ಯವಾಗಿ ಬೈದು, ಬೆದರಿಸಿ, ಜಾತಿ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳಾದ ಗುಲ್ವಾಡಿ ನಿವಾಸಿ ಪಳ್ಳಿ ಸುಲೇಮಾನ್ ಮತ್ತು ಶಫಿ ಎಂಬುವರನ್ನು ಪೊಲೀಸರು ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಬಂಧಿಸಿದ್ದಾರೆ.
ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಂತೆ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಎ.ಕಾಯ್ಕಿಣಿ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ನಿರಂಜನ್ ಗೌಡ ಮತ್ತು ಪೊಲೀಸ್ ಉಪನಿರೀಕ್ಷಕಿ ಚಂದ್ರಕಲಾ ಪತ್ತಾರ ಹಾಗೂ ಠಾಣಾ ಸಿಬ್ಬಂದಿಗಳಾದ ಸೂರ ನಾಯ್ಕ, ರಮೇಶ ನರೂಣಿ, ಮಂಜುನಾಥ ಪಡಸಲಗಿ ಆರೋಪಿಯನ್ನು ಬಂಧಿಸಿದ್ದಾರೆ.