ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾಭವನದಲ್ಲಿ ನಡೆದ ಅರಿಶಿಣ- ಕುಂಕುಮ ಕಾರ್ಯಕ್ರಮದಲ್ಲಿ ವಾಗ್ಮಿ ಸಹನಾ ಕುಂದರ್ ಮಾತನಾಡಿದರು. ರಾಜೀವಿ, ಸಂತೋಷ್ ಶೆಟ್ಟಿ ಮುಂಬೈ, ರವೀಂದ್ರ ರೈ ಗೋಸಾಡ ಸಹಿತ ಪ್ರಮುಖರಿದ್ದರು. 
ಉಡುಪಿ

ಹಿಂದೂಗಳ ಸಂಸ್ಕೃತಿ ಪ್ರತೀಕ ಅರಿಶಿನ- ಕುಂಕುಮ

ಬದಿಯಡ್ಕ: ಕುಂಕುಮವನ್ನು ಶೋಕಿಗಾಗಿ ಹಾಕಬಾರದು. ಅರಿಶಿಣ-ಕುಂಕುಮ ಹಿಂದೂ ಧರ್ಮದ ಸಂಸ್ಕೃತಿ. ಜೀವನದಲ್ಲಿ ನಡೆಯುವ ಪ್ರತಿ ಘಟನೆಯೂ ಮನುಷ್ಯನ ಬದುಕಿಗೆ ಪಾಠವಾಗಿದೆ. ಹಿಂದೂಗಳು ತಮ್ಮ ಬದುಕನ್ನು ಹಿಂದುತ್ವ, ಧರ್ಮಕ್ಕಾಗಿಯೇ ಮೀಸಲಿಡಬೇಕು ಎಂದು ವಾಗ್ಮಿ ಸಹನಾ ಕುಂದರ್ ಉಡುಪಿ ಕರೆ ನೀಡಿದರು.
ಕಾಸರಗೋಡು ಸನಾತನ ಸಾಂಸ್ಕೃತಿಕ ಯುವ ಕಲಾವೇದಿಕೆ ನೇತೃತ್ವದಲ್ಲಿ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾಭವನದಲ್ಲಿ ಶುಕ್ರವಾರ ಅರಿಶಿಣ-ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪೊಡಿಪ್ಪಳ್ಳ ಭಂಡಾರಮನೆಯ ರಾಜೀವಿ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ನಗರಪಾಲಿಕೆ ಸದಸ್ಯ ಸಂತೋಷ್ ಶೆಟ್ಟಿ ಮುಂಬೈ, ಪ್ರಮುಖರಾದ ರವೀಂದ್ರ ರೈ ಗೋಸಾಡ, ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷೆ ಯಶೋದಾ ಎನ್., ಕಾರಡ್ಕ ಪಂಚಾಯಿತಿ ಅಧ್ಯಕ್ಷೆ ಜನನಿ, ಬದಿಯಡ್ಕ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅನಿತಾ ಕಾಸರಗೋಡು, ವೀಣಾ ಅರುಣ್ ಶೆಟ್ಟಿ, ಪ್ರಮೀಳಾ ಮಜಲು ಉಪಸ್ಥಿತರಿದ್ದರು.
ಶಾರದಾಂಬಾ ಬಾಲಗೋಕುಲದ ಮಕ್ಕಳು ಪ್ರಾರ್ಥಿಸಿದರು. ಲಕ್ಷ್ಮೀ ಮಾರ್ಪನಡ್ಕ ಸ್ವಾಗತಿಸಿದರು. ಚಂದ್ರಕಲಾ ನೆಟ್ಟಣಿಗೆ ವಂದಿಸಿದರು. ರಾಜೇಶ್ ಶೆಟ್ಟಿ ಕುಂಬ್ಡಾಜೆ ನಿರೂಪಿಸಿದರು.