ವಲಿಯಪರಂಬದಲ್ಲಿ ಸುನಾಮಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಲ್ಪಿತ ಕಾರ್ಯಾಚರಣೆ ನಡೆಯಿತು. 
ಉಡುಪಿ

ವಲಿಯಪರಂಬದಲ್ಲಿ ಸುನಾಮಿ ಕಲ್ಪಿತ ಕಾರ್ಯಾಚರಣೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸುನಾಮಿ ಸನ್ನದ್ಧ’ ಎಂಬ ಸಂಕಲ್ಪದೊಂದಿಗೆ ವಲಿಯಪರಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿಲಕಡಪ್ಪುರ ಪ್ರದೇಶದಲ್ಲಿ ಸುನಾಮಿ ಕಲ್ಪಿತ ಕಾರ್ಯಾಚರಣೆ ನಡೆಯಿತು.
ಸುನಾಮಿ ಎಚ್ಚರಿಕೆ ಬಂದಾಗ ಸಾರ್ವಜನಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡುವುದು ಹಾಗೂ ವಿವಿಧ ಇಲಾಖೆಗಳು ಮತ್ತು ಸ್ವಯಂಸೇವಕರು ಸಮನ್ವಯದಿಂದ ವಿಪತ್ತು ನಿರ್ವಹಣಾ ಪ್ರತಿಕ್ರಿಯೆ ಖಚಿತಪಡಿಸಿಕೊಳ್ಳುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು.
ಸುನಾಮಿ ಬಂದಾಗ ಎಚ್ಚರಿಕೆ ನೀಡುವುದರಿಂದ ಹಿಡಿದು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವವರೆಗಿನ ವಿವಿಧ ಹಂತಗಳ ನಿರ್ವಹಣೆಯ ಪ್ರಾಯೋಗಿಕ ತಾಲೀಮು ನಡೆಸಲಾಯಿತು. ಕಲ್ಪಿತ ಕಾರ್ಯಾಚರಣೆ ಬಗ್ಗೆ ಮಾಹಿತಿಯಿಲ್ಲದ ಸಾರ್ವಜನಿಕರು ಕೆಲಕಾಲ ಆತಂಕಕ್ಕೀಡಾದರು.

ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ.ಉದಯಕುಮಾರ್, ಕಾಞಂಗಾಡ್ ಆರ್‌ಡಿಒ ಸುದೀಪ್ ಪಿ., ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬುಶ್ರಾ ಎಂ.ಟಿ., ಹೊಸದುರ್ಗ ತಹಸೀಲ್ದಾರ್ ರಮೇಶನ್ ಪಿ., ಡಿಎಂ ಯೋಜನಾ ಸಂಯೋಜಕ ಅಹಮದ್ ಶಫೀಕ್, ವೈದ್ಯಾಧಿಕಾರಿ ಡಾ.ಶ್ರೀಕುಮಾರ್, ಅಗ್ನಿಶಾಮಕ ಮತ್ತು ರಕ್ಷಣಾ ದಳದ ನಿಲ್ದಾಣಾಧಿಕಾರಿ ಪ್ರಭಾಕರನ್, ವಲಿಯಪರಂಬ ಗ್ರಾಪಂ ಕಾರ್ಯದರ್ಶಿ ಜಿಮ್ಮಿ ಜಾನ್, ಉಪ ತಹಸೀಲ್ದಾರ್(ವಿಪತ್ತು ನಿರ್ವಹಣೆ) ಪಿ.ವಿ.ತುಳಸಿ ರಾಜ್, ಪೊಲೀಸ್ ಉಪ-ನಿರೀಕ್ಷಕರಾದ ಸತೀಶ್ ಕುಮಾರ್ ಮತ್ತು ದಿನೇಶ್ ರಾಜ್ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶ್ರೀಜೇಶ್ ಪಾಲ್ಗೊಂಡಿದ್ದರು.