ಉಡುಪಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು 1919ರ ನ.11ರಂದು ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದೆ. ಶತಮಾನಕ್ಕೂ ಹೆಚ್ಚಿನ ಕಾಲಮಾನ ಕಂಡಿರುವ ಈ ಬ್ಯಾಂಕ್ ನಂಬಿಕೆ, ಸದಾ ನಾವೀನ್ಯತೆ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿನ ಶ್ರೇಷ್ಠತೆ ಕಾಪಾಡಿಕೊಂಡು ಬಂದಿದೆ. ತನ್ನ 108ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತುರುವುದು ಐತಿಹಾಸಿಕ ಸಂದರ್ಭವಾಗಿದೆ ಎಂದು ನಿವೃತ್ತ ಡಿಜಿಎಂ ನಾಗರಾಜ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಮಣಿಪಾಲ ಇನ್ನಲ್ಲಿ ಆಯೋಜಿಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 108ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬ್ಯಾಂಕ್ನ ಸಂಸ್ಥಾಪಕರಲ್ಲೊಬ್ಬರಾದ ಹಾಜಿ ಅಬ್ದುಲ್ಲ ಸಾಹೇಬ್ ಅವರಿಗೆ ಉಡುಪಿಯಲ್ಲಿರುವ ಹಾಜಿ ಅಬ್ದುಲ್ಲ ಸ್ಮಾರಕ ವಸ್ತು ಸಂಗ್ರಹಾಲಯದಲ್ಲಿ ಗೌರವ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ನಿವೃತ್ತ ಎಜಿಎಂ ಪುಷ್ಪಾ ಕಿಶೋರ, ಪ್ರಾದೇಶಿಕ ಮುಖ್ಯಸ್ಥ ಅಶೋಕ ಭಂಡಗೆ, ಬ್ಯಾಂಕ್ನ ಸಿಬ್ಬಂದಿ, ಗ್ರಾಹಕರು, ಪಿಂಚಣಿದಾರರು, ಮೌಲ್ಯಯುತ ಪಾಲುದಾರರು ಹಾಗೂ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.
ಬ್ಯಾಂಕ್ನ 108ನೇ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಗ್ರಾಹಕರ ವ್ಯವಹಾರಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಇನ್ನಷ್ಟು ಸರಳೀಕರಣಗೊಳಿಸಲು ಹೊಸ ಉತ್ಪನ್ನ ಮತ್ತು ಸೇವೆಗಳ ಕೊಡುಗೆ ತಿಳಿಸಲಾಯಿತು. ಡಿಜಿಟೈಸ್ಡ್ ಕಾರ್ಪೊರೇಟ್ ಸಂಬಳ ಖಾತೆ, ಯೂನಿಯನ್ ವೆಹಿಕಲ್ ಪ್ಲಸ್, ಪಿಪಿಎಫ್ ಆಧಾರಿತ ಡಿಜಿಟಲ್ ಸಾಲ, ಯುಪಿಐ-ಗ್ಲೋಬಲ್, ಸರ್ಕಲ್. ಐಸಿಡಿ ಮತ್ತು ಆಟೋಪೇ, ಆನ್ಲೈನ್ ಲಾಕರ್ ಸೌಲಭ್ಯ, ಎಂ-ಪಾಸ್ಬುಕ್, ಎನ್ಪಿಎಸ್ ತತ್ಕಾಲ್, ಓಮ್ನಿಚಾನೆಲ್ ಅನುಭವದೊಂದಿಗೆ ರಿಟೇಲ್ ಇಂರ್ಟನೆಟ್ ಬ್ಯಾಂಕಿಂಗ್, ಡಿಜಿಟಲ್ ಸಾಲ್ವೆನ್ಸಿ ಪ್ರಮಾಣಪತ್ರ, ಕೇಂದ್ರೀಕೃತ ಗ್ರಾಹಕ ನಿರ್ವಹಣಾ ಪೋರ್ಟಲ್ ಸೇವೆಗಳನ್ನು ಗ್ರಾಹಕರಿಗೆ ತಿಳಿಸಲಾಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 108ನೇ ಸಂಸ್ಥಾಪನಾ ದಿನಾಚರಣೆಯ ಈ ಕಾರ್ಯಕ್ರಮವು ಬ್ಯಾಂಕ್ನ ಶ್ರೀಮಂತ ಪರಂಪರೆ ಮತ್ತು ಸಾಧನೆಗಳನ್ನು ಸ್ಮರಿಸುವುದೇ ಆಗಿದೆ. ಅಲ್ಲದೆ, ಗ್ರಾಹಕ ಕೇಂದ್ರಿತ ಸೇವೆ, ಡಿಜಿಟಲ್ ನಾವೀನ್ಯತೆ, ಆರ್ಥಿಕ ಸೇರ್ಪಡೆ, ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿ ಹಾಗೂ ಸುಸ್ಥಿರ ಬೆಳವಣಿಗೆಯಲ್ಲಿ ನಮ್ಮ ಬ್ಯಾಂಕ್ನ ಬದ್ಧತೆಯನ್ನು ಪುನರುಚ್ಚರಿಸುವುದು ಮುಖ್ಯ ಉದ್ದೇಶವಾಗಿದೆ.ಅಶೋಕ ಭಂಡಗೆ. ಬ್ಯಾಂಕ್ನ ಪ್ರಾದೇಶಿಕ ಮುಖ್ಯಸ್ಥ.