ಬಂಟ್ವಾಳ ತಾಲೂಕು ಬಂಟರ ಸಂದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ವೈಭವದ ಸಭಾಕಾರ್ಯಕ್ರಮವನ್ನು ಉದ್ಯಮಿ ಬಾಲಕೃಷ್ಣ ಎಂ.ರೈ. ಹಿಂಗಾರ ಅರಳಿಸಿ ಉದ್ಘಾಟಿಸಿದರು. ನಿರಂಜನ್ ಸೇಮಿತ, ಸುರೇಂದ್ರ ಬಿ, ಸದಾನಂದ ಆಳ್ವ ಮೊದಲಾದವರಿದ್ದರು.  
ಉಡುಪಿ

ಜೀವನದಲ್ಲಿ ನಂಬಿಕೆಯೇ ಬಂಡವಾಳ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ಮಹಿಳಾ ವಿಭಾಗ, ಯುವವಿಭಾಗ ಹಾಗೂ ವಲಯ ಬಂಟರ ಸಂಗಳ ಸಹಯೋಗದೊಂದಿಗೆ ಸಂದ 14ನೇ ವಾರ್ಷಿಕೋತ್ಸವ ಹಾಗೂ ಬಂಟರ ವಿವಿಧ ಸಾಂಸ್ಕೃತಿಕ ವೈಭವ ಕಾರ‌್ಯಕ್ರಮ ಬ್ರಹ್ಮರಕೊಟ್ಲುವಿನ ಬಂಟರ ಭವನದಲ್ಲಿ ಭಾನುವಾರ ನಡೆಯಿತು.
ಬೆಳಗ್ಗೆ ಆರಂಭಗೊಂಡ ಸಾಂಸ್ಕೃತಿಕ ವೈಭವಕ್ಕೆ ಕೃಷಿಕ ನಿರಂಜನ್ ಸೇಮಿತ ಕುಂದಬೆಟ್ಟು ಚಾಲನೆ ನೀಡಿದರು. ಬಂಟರ ಸಂದ ತಾಲೂಕು ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಸಭಾಕಾರ್ಯಕ್ರಮವನ್ನು ಮುಖ್ಯಅತಿಥಿ ಬಾಲಕೃಷ್ಣ ಎಂ.ರೈ ಹಿಂಗಾರ ಅರಳಿಸಿ ಉದ್ಘಾಟಿಸಿ, ಜೀವನದಲ್ಲಿ ನಂಬಿಕೆಯೇ ಬಂಡವಾಳ. ತನ್ನ ಶ್ರಮದ ಫಲವಾಗಿ ಸಂಸ್ಥೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿದ್ದು, ಇದು ಬಂಟ್ವಾಳ ತಾಲೂಕಿನ ಬಂಟ ಸಮುದಾಯಕ್ಕೆ ದೊರೆತ ಗೌರವ ಎಂದರು.
ಮಂಗಳೂರು ತಾಲೂಕು ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಬಿ.ಕಂಬಳಿ ಅಡ್ಯಾರ್ ಗುತ್ತು, ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜಿಪ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ.ರೈ ಕಲ್ಲಡ್ಕ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರುಗುತ್ತು, ಕಲೆ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಗಣೇಶ್ ಶೆಟ್ಟಿ ಗೋಳ್ತಮಜಲು ಹಾಗೂ ತಾಲೂಕಿನ 15 ವಲಯಗಳ ಬಂಟರ ಸಂದ ಅಧ್ಯಕ್ಷರು ಉಪಸ್ಥಿತರಿದ್ದರು. ಬಂಟರ ಸಂದ ಜಗನ್ನಾಥ ಚೌಟ ಬದಿಗುಡ್ಡೆ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು ಸ್ವಾಗತಿಸಿದರು. ಕೋಶಾಧಿಕಾರಿ ಲೋಕೇಶ್ ಶೆಟ್ಟಿಕುಳ ವಂದಿಸಿದರು. ವಾಣಿ ಗ್ರಾ.ಪಂ.ವಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೊಡಾಜೆ ನಿರೂಪಿಸಿದರು.

ಸಹಾಯಧನ, ಬಹುಮಾನ ವಿತರಣೆ

ಸಂದ ಮಹಿಳಾ ವಿಭಾಗದಿಂದ ಇಬ್ಬರಿಗೆ ಸಹಾಯಧನ ವಿತರಿಸಲಾಯಿತು. ವಲಯ ಬಂಟರ ಸಂಗಳಿಂದ ಬಂಟೆರೆ ಕಲಾಪಂಥ, ಮಹಿಳಾ ವಿಭಾಗದಿಂದ ‘ಅಳಿಯಕಟ್ಟು‘ ಕಿರುಪ್ರಹಸನ, ಯುವ ವಿಭಾಗದಿಂದ ‘ಗುತ್ತುದ ಇಲ್‌ಲ್’ ಕಿರುಪ್ರಹಸನ ನಡೆಯಿತು. ಸಾಂಸ್ಕೃತಿಕ ವೈಭವದಲ್ಲಿ ವಿಜೇತ ವಲಯ ಬಂಟರ ಸಂಕ್ಕೆ ಬಹುವಾನ ವಿತರಿಸಲಾಯಿತು.