ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿನ್ಸೆಂಟ್ ಡಿಸೋಜ, ಓಸ್ವಾಲ್ಡ್ ಡಿಸೋಜ, ರಿಚರ್ಡ್ ಕರ್ಡೋಜ ಮತ್ತಿತರರಿದ್ದರು.  
ಉಡುಪಿ

ಸೇವೆಯಿಂದಲೇ ನಿಜವಾದ ಸುಖ ಪ್ರಾಪ್ತಿ

ಇಂದಿರಾ ಎನ್ ಕೆ

ಮೂಡುಬಿದಿರೆ: ಈಶಸೇವೆ, ದೇಶಸೇವೆ, ಜನಸೇವೆ, ಕಲಾಸೇವೆಯೇ ಭಾರತದ ಸೇವಾ ಪರಂಪರೆಯಾಗಿದ್ದು, ಸೇವೆಯಲ್ಲಿಯೇ ನಿಜವಾದ ಸುಖ ಸಿಗುತ್ತದೆ ಎಂದು ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್ ಧರ್ಮಗುರು ವಿನ್ಸೆಂಟ್ ಡಿಸೋಜ ಹೇಳಿದರು.

ಕೀರ್ತಿನಗರದ ಲಯನ್ಸ್ ಹರಿಭವ ಸಭಾಭವನದಲ್ಲಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಜಿಎಲ್‌ಟಿ ಸಂಯೋಜಕ ಓಸ್ವಾಲ್ಡ್ ಡಿಸೋಜ ಪದಗ್ರಹಣ ನೆರವೇರಿಸಿದರು.
ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಸುವರ್ಣ ವರ್ಷದ ಕಾರ್ಯಗಳನ್ನು ಸ್ಮರಿಸಿದರು. ಹೋಲಿ ರೋಸರಿಯ ಸಮೀಕ್ಷಾ, ಬಿ.ಆರ್.ಪಿ.ಯ ಸುಧೇಶ್, ಪ್ರಾಂತ್ಯದ ಶ್ರೇಯಾ, ಜೈನ ಪ್ರೌಢಶಾಲೆಯ ಸಿಂಧೂರ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಶಿವಪ್ರಸಾದ್ ಹೆಗ್ಡೆ, ರತ್ನಾಕರ ಎಂ.ಹೆಗ್ಡೆ, ವಿನೋದ್ ಡೇಸಾ, ಜೊಸ್ಸಿ ಮಿನೇಜಸ್ ಪ್ರಾಯೋಜಕತ್ವದಲ್ಲಿ ಶಿಕ್ಷಣ, ಸಮವಸ್ತ್ರ, ಮನೆ ನಿರ್ಮಾಣ, ಆಶ್ರಮಕ್ಕೆ ಸಹಾಯಧನ ವಿತರಿಸಲಾಯಿತು. ವಿವಿಧ ಶಾಲೆಗಳಿಗೆ ಉಚಿತ ಪುಸ್ತಕ ವಿತರಿಸಿದ ಕೆ.ಶ್ರೀಪತಿ ಭಟ್ ಅವರನ್ನು ಅಭಿನಂದಿಸಲಾಯಿತು.
ಲಯನ್ಸ್ ಜಿಲ್ಲಾ ಉಪ ಗವರ್ನರ್ ವೆಂಕಟೇಶ್ ಹೆಬ್ಬಾರ್, ಮಾಜಿ ಗವರ್ನರ್ ಮೆಲ್ವಿನ್ ಡಿಸೋಜ, ಪ್ರಾಂತೀಯ ಅಧ್ಯಕ್ಷ ಎಂ.ಕೆ. ದಿನೇಶ್, ವಲಯಾಧ್ಯಕ್ಷ ದೇವುದಾಸ ಹಿಬರೋಡಿ, ಲಿಯೋ ನೂತನ ಅಧ್ಯಕ್ಷೆ ಶಿವಾನಿ, ನಿರ್ಗಮನ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ, ಪ್ರಮೀಳಾ ಕರ್ಡೋಜ, ಶಿವಪ್ರಸಾದ್, ಓಸ್ವಾಲ್ಡ್ ಡಿಕೋಸ್ತ, ಹರೀಶ್ ತಂತ್ರಿ, ಹರ್ಷ, ಅರುಣ್ ಡಿಸಿಲ್ವ, ಜೆಸಿಂತಾ ಡಿಮೆಲ್ಲೋ, ಸ್ವಯಂ ಎಸ್. ಪೂಜಾರಿ, ಶಶಾಂಕ್, ರಾಹುಲ್ ಹೆಗ್ಡೆ, ವ್ಯಾಲೆನ್ಸ್ ಮೆಂಡೋನ್ಸಾ ಉಪಸ್ಥಿತರಿದ್ದರು.
ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ನವಾನಂದ ಧ್ವಜವಂದನೆ ನೆರವೇರಿಸಿದರು. ರೊನಾಲ್ಡ್ ಸೆರಾವೊ ನೀತಿ ಸಂಹಿತೆ ಪಠಿಸಿದರು. ಓಸ್ವಾಲ್ಡ್ ಡಿಕೋಸ್ತ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ದಯಾನಂದ ನಿರೂಪಿಸಿದರು. ಹಷರ್ ವಂದಿಸಿದರು.