ಕೊಡವೂರಿನ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ರಥೋತ್ಸವದ ನಿಮಿತ್ತ ಸಾಧಕರನ್ನು ಸನ್ಮಾನಿಸಲಾಯಿತು. ವಿ.ಜಿ. ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಆನಂದ ಪಿ. ಸುವರ್ಣ, ರವಿರಾಜ ಹೆಗ್ಡೆ, ದಿವಾಕರ್​ ಶೆಟ್ಟಿ, ಉಷಾ ಆನಂದ ಸುವರ್ಣ, ಎ. ರಾಜ ಸೇರಿಗಾರ್​ ಇತರರಿದ್ದರು. 
ಉಡುಪಿ

ಭಕ್ತಿ, ನಂಬಿಕೆಯೇ ಜೀವನದ ಬುನಾದಿ

* ಉದ್ಯಮಿ ವಿ.ಜಿ. ಶೆಟ್ಟಿ ಅಭಿಪ್ರಾಯ

* ಕೊಡವೂರಿನಲ್ಲಿ ಧಾರ್ಮಿಕ ಕಾರ್ಯಕ್ರಮ

 ಉಡುಪಿ: ದೇವರ ಮೇಲಿನ ಭಕ್ತಿಯಿಂದಾಗಿ ನಮ್ಮೊಳಗಿನ ಅಶಾಂತಿ, ಭಯ ನಿವಾರಣೆಯಾಗಿ ಶಾಂತಿ ಲಭಿಸುತ್ತದೆ. ನಂಬಿಕೆಯು ನಮ್ಮನ್ನು ಸಂಕಷ್ಟಗಳಲ್ಲಿ ಧೈರ್ಯದಿಂದ ಮುನ್ನಡೆಯಲು ಶಕ್ತಿ ನೀಡುತ್ತವೆ. ಹೀಗಾಗಿ ಭಕ್ತಿ ಮತ್ತು ನಂಬಿಕೆಯೇ ಜೀವನದ ಭದ್ರ ಬುನಾದಿಯಾಗಿದೆ ಎಂದು ಉದ್ಯಮಿ ವಿ.ಜಿ. ಶೆಟ್ಟಿ ಅಭಿಪ್ರಾಯಪಟ್ಟರು.
ಮಲ್ಪೆ ಸಮೀಪದ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ರಥೋತ್ಸವದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಾಲ್ಯದಲ್ಲಿ ಹಿರಿಯರು ನೀಡಿದ ಸಂಸ್ಕಾರವಷ್ಟೇ ಜೀವನದಲ್ಲಿ ಸತ್ಪಥ ತೋರಿಸಬಲ್ಲದು. ಮುಂದಿನ ಪೀಳಿಗೆಗೆ ನಾವು ಇದನ್ನೇ ಉಡುಗೊರೆಯಾಗಿ ನೀಡಬೇಕು ಎಂದರು.

ಪ್ರಶಸ್ತಿ ಪ್ರದಾನ

ಶ್ರೀ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅಡಿಗ ಕೃಷ್ಣಮೂರ್ತಿ ಭಟ್​, ಯು.ನರೇಂದ್ರ ಕಲ್ಮಾಡಿ, ಸದಾನಂದ ಸೇರಿಗಾರ್​, ಪೂರ್ಣಿಮಾ ಜನಾರ್ದನ್​ ಅವರಿಗೆ 'ಶ್ರೀ ಶಂಕರನಾರಾಯಣ ಅನುಗ್ರಹ ಪ್ರಶಸ್ತಿ' ನೀಡಲಾಯಿತು.
ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿ ಆನಂದ ಪಿ. ಸುವರ್ಣ, ಕೆಎಂಎಫ್​ ಅಧ್ಯಕ್ಷ ರವಿರಾಜ ಹೆಗ್ಡೆ, ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ತೋಟದಮನೆ ದಿವಾಕರ್​ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಷಾ ಆನಂದ ಸುವರ್ಣ, ಎ. ರಾಜ ಸೇರಿಗಾರ್​, ವಾದಿರಾಜ್​ ಸಾಲ್ಯಾನ್​, ಯಶೋಧರ್​ ಸಾಲ್ಯಾನ್​, ಬಾಬಾ ಕೆ., ಉಪಸ್ಥಿತಿತರಿದ್ದರು.
ಶ್ರೀದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್​ ಜಿ. ಕೊಡವೂರು ಸ್ವಾಗತಿಸಿ, ಪ್ರಸ್ತಾಪಿಸಿದರು. ಶಂಕರ ನಾರಾಯಣ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್​ ಕೊಡವೂರು ವಂದಿಸಿದರು. ಕಾರ್ಯದರ್ಶಿ ಸತೀಶ್​ ಕೊಡವೂರು ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ತಂಡದವರಿಂದ 'ನೃತ್ಯಸಿಂಚನ' ಕಾರ್ಯಕ್ರಮ ನಡೆಯಿತು.