ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಆಶಾಲತಾ, ಆನಂದ ಅಡಿಲು, ಪ್ರಮೋದ್ ಕುಮಾರ್, ಸತೀಶ್ ಬೆದ್ರಬೆಟ್ಟು, ಶಶಿಧರ ಗೌಡ, ಸಂಜೀವ ಗೌಡ ಮೊದಲಾದವರು ಇದ್ದರು.
ಬೆಳ್ತಂಗಡಿ: ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಗೃಹ ಮಿಥಿಲಾದಲ್ಲಿ ಕಾರ್ಯಕರ್ತರಿಂದ ಗೌರವಾರ್ಪಣೆ ನಡೆಯಿತು.
ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್.ಇಂದಬೆಟ್ಟು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗೌರವ ಸಲ್ಲಿಸಿ, ಬೆಳ್ತಂಗಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವ ಜನಸ್ನೇಹಿ ಶಾಸಕರಿಗೆ ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಬಂದಿರುವುದು ತಾಲೂಕಿನ ಪ್ರತಿಯೊಬ್ಬ ಪ್ರಜೆಗೂ ಸಿಕ್ಕ ಗೌರವವಾಗಿದೆ ಎಂದರು.
ಇಂದಬೆಟ್ಟು ಪಂಚಾಯಿತಿ ಅಧ್ಯಕ್ಷೆ ಆಶಾಲತಾ, ನಿಕಟಪೂರ್ವ ಪಂಚಾಯಿತಿ ಅಧ್ಯಕ್ಷ ಆನಂದ ಅಡಿಲು, ಸದಸ್ಯರಾದ ಪ್ರಮೋದ್ ಕುಮಾರ್, ಸತೀಶ್, ಬೂತ್ ಅಧ್ಯಕ್ಷರಾದ ಶಶಿಧರ ಗೌಡ, ಸಂಜೀವ ಗೌಡ, ನಿತೇಶ್ ಕಡಿತ್ಯಾರು, ನವೀನ್ ಜೈನ್, ಗಣೇಶ್ ಆಚಾರ್ಯ, ಪ್ರತೀಶ್, ತಾಲೂಕು ಯುವ ಮೋರ್ಚಾ ಸದಸ್ಯರಾದ ಸಂತೋಷ್, ರೈತ ಮೋರ್ಚಾದ ಉಪಾಧ್ಯಕ್ಷ ಪಳನಿ ಸ್ವಾಮಿ, ಹಾಲಿನ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಕಾಂಜಾನು, ಆದಿಚುಂಚನಗಿರಿ ಶ್ರೀ ಮಠದ ಅರ್ಚಕ ಶ್ರೀನಾಥ್ ಸೋಮಯ್ಯ ದಡ್ಡು ಇದ್ದರು.