ಹರಿಹರ ಪಲ್ಲತ್ತಡ್ಕ-ನಡುಗಲ್ಲು ರಸ್ತೆಯ ಕೊರಂಬಠ ಎಂಬಲ್ಲಿ ರಸ್ತೆಗೆ ಮರಬಿದ್ದು ಸಂಚಾರಕ್ಕೆ ಅಡಚಣೆಯುಂಟಾಯಿತು.  
ಉಡುಪಿ

ನಡುಗಲ್ಲಿನಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ತಡೆ

ಇಂದಿರಾ ಎನ್ ಕೆ

ಸುಬ್ರಹ್ಮಣ್ಯ

: ನಡುಗಲ್ಲು ಪರಿಸರದಲ್ಲಿ ಗುರುವಾರ ಬೆಳಗ್ಗಿನಿಂದ ಭಾರಿ ಗಾಳಿ-ಮಳೆ ಸುರಿದಿದ್ದು ಹರಿಹರ ಪಲ್ಲತ್ತಡ್ಕ-ನಡುಗಲ್ಲು ರಸ್ತೆಯ ಕೊರಂಬಠ ಎಂಬಲ್ಲಿ ರಸ್ತೆಗೆ ಮರಬಿದ್ದು ಸಂಚಾರಕ್ಕೆ ಅಡಚಣೆಯುಂಟಾಯಿತು.

ಇದರಿಂದಾಗಿ ಹರಿಹರ-ಪಲ್ಲತ್ತಡ್ಕ-ನಡುಗಲ್ಲು ಸಂಚಾರ ಬಂದ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಭಾರಿ ಮಳೆಗೆ ಕೊರಂಬಠದಲ್ಲಿ ಗುಡ್ಡ ಕುಸಿದಿದೆ. ಮಣ್ಣು ಕುಸಿತದಿಂದಾಗಿ ಮರವು ರಸ್ತೆಗೆ ಉರುಳಿ ಬಿತ್ತು.

ಸುಬ್ರಹ್ಮಣ್ಯ ಹಾಗೂ ಗ್ರಾಮೀಣ ಪ್ರದೇಶಗಳಾದ ಕೈಕಂಬ, ಬಿಳಿನೆಲೆ, ನೆಟ್ಟಣ, ಐನೆಕಿದು, ಬಾಳುಗೋಡು, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ನಡುಗಲ್ಲು, ಗುತ್ತಿಗಾರು, ಒಳಲಂಬೆ, ಕಮಿಲ, ಮೊಗ್ರ, ಯೇನೆಕಲ್ಲು, ಬಳ್ಪ, ಕೇನ್ಯ, ಬೀದಿಗುಡ್ಡೆ, ಪಂಜ, ಕರಿಕ್ಕಳ, ನಿಂತಿಕಲ್ಲು, ಅಲೆಕ್ಕಾಡಿ ಮೊದಲಾದೆಡೆ ಗುರುವಾರ ಮಳೆಯಾಗಿದೆ.