ವಿದ್ಯುತ್ ಕಂಬಕ್ಕೆ ತಾಗುವ ಮರದ ಕೊಂಬೆಗಳನ್ನು ಕಟಾವು ಮಾಡುತ್ತಿರುವುದು.  
ಉಡುಪಿ

ಮರದ ಕೊಂಬೆ ಕಟಾವು ಚುರುಕು

ಇಂದಿರಾ ಎನ್ ಕೆ
ಬ್ರಹ್ಮಾವರ: ಮಳೆಗಾಲದ ಪೂರ್ವ ಸಿದ್ಧತೆ ಹಿನ್ನೆಲೆ ಬ್ರಹ್ಮಾವರ ಮೆಸ್ಕಾಂ ಗ್ರಾಮೀಣ ಭಾಗದ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಕ್ಕೆ ತಾಗುವ ಮರದ ಕೊಂಬೆಗಳನ್ನು ಕಟಾವು ವಾಡುವ ಕಾರ್ಯ ಬಾರಕೂರು, ಕೂರಾಡಿ, ಕೊಕ್ಕರ್ಣೆ ಭಾಗ ಸೇರಿದಂತೆ ಬಹುತೇಕ ಕಡೆಯಲ್ಲಿ ನಡೆಯುತ್ತಿದೆ.
ಬ್ರಹ್ಮಾವರ ಉಪ ವಿಭಾಗದ 5 ಸೆಕ್ಷನ್‌ಗಳಾದ ಬ್ರಹ್ಮಾವರ 1 ಮತ್ತು 2 ಕಲ್ಯಾಣಪುರ, ಪೇತ್ರಿ, ಹೆಗ್ಗುಂಜೆ ಒಟ್ಟು 1412 ಟ್ರಾನ್ಸ್‌ಫಾರಂಗಳು ಇದ್ದು, ಪ್ರತೀ ಸೆಕ್ಷನ್‌ಗೆ 14ರಿಂದ 16 ಮಂದಿ ಲೈನ್‌ವ್ಯಾನ್‌ಗಳು ಇದ್ದಾರೆ. ಮಳೆಗಾಲದ ತುರ್ತು ಕೆಲಸಗಳಿಗೆ 4ತಿಂಗಳ ಅವಧಿಗೆ ಮರದ ಕೊಂಬೆ ಕಟಾವಿಗೆ ತಾತ್ಕಾಲಿಕವಾಗಿ ಸ್ಥಳೀಯ ಪರಿಣಿತರನ್ನು ನೇಮಕ ವಾಡಿ ತುರ್ತು ಕೆಲಸಗಳ ನಿರ್ವಹಣೆ ವಾಡಲಾಗುತ್ತದೆ.
ಬ್ರಹ್ಮಾವರ ಉಪವಿಭಾಗದಲ್ಲಿ 655 ಕಿ.ಮೀ. ಹೈಟೆನ್ಶನ್ ಮತ್ತು 2,336 ಕಿ.ಮೀ. ಲೋ ಟೆನ್ಶನ್ ವಿದ್ಯುತ್ ಸರಬರಾಜು ಇದ್ದು, ಮಳೆಗಾಲದಲ್ಲಿ ಬೀಸುವ ಭಾರಿ ಗಾಳಿಗೆ ಮರದ ಕೊಂಬೆಗಳು ತಾಗಿ ವಿದ್ಯುತ್ ನಿಲುಗಡೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಎಚ್. ತಿಳಿಸಿದರು.