ಕೆಳಂದೂರು ಸಮೀಪ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬ ಸಮೇತ ರಸ್ತೆಗುರುಳಿದ ಬೃಹತ್‌ಮರ. 
ಉಡುಪಿ

ಭಾರಿ ಗಾಳಿ-ಮಳೆಗೆ ರಸ್ತೆಗುರುಳಿದ ಮರ

ಇಂದಿರಾ ಎನ್ ಕೆ
ಪುತ್ತೂರು ಗ್ರಾಮಾಂತರ: ಭಾರಿ ಗಾಳಿ, ಮಳೆಗೆ ಬೃಹತ್‌ಗಾತ್ರದ ಮರವೊಂದು ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ರಸ್ತೆಗುರುಳಿದ ಘಟನೆ ಪಡುವನ್ನೂರು ಗ್ರಾಮದ ಕೆಳಂದೂರು ಸಮೀಪ ಶುಕ್ರವಾರ ನಡೆದಿದೆ.
ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿ-ಮಳೆಗೆ ಈಶ್ವರಮಂಗಲದಿಂದ ದೊಡ್ಡಮನೆ ಕಡೆಗೆ ಹೋಗುವ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರ ಉರುಳಿ ಹಾದುಹೋಗಿದ್ದ ವಿದ್ಯುತ್ ಎಚ್‌ಟಿ ಲೈನ್‌ನ ಕಂಬದ ಮೇಲೆ ಬಿದ್ದು, ವಿದ್ಯುತ್ ಕಂಬ ಸಮೇತ ರಸ್ತೆಗೆ ಅಡ್ಡವಾಗಿ ಬಿದ್ದು, ರಸ್ತೆ ಸಂಚಾರಕ್ಕೆ ತಡೆಯಾಗಿದೆ.
ವಿದ್ಯುತ್ ಕಂಬ ಮುರಿದು ಹೋಗಿ ತಂತಿಗಳ ಸಂಪರ್ಕ ಕಡಿತಗೊಂಡ ಪರಿಣಾಮ ಕೆಲಂದೂರು, ದೊಡ್ಡಮನೆ, ಕುತ್ಯಾಳ ಕಾನ, ಕುತ್ಯಾಳ ಭಾಗದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮೆಸ್ಕಾಂ ಇಲಾಖೆ ಉರುಳಿಬಿದ್ದ ಮರ ಮತ್ತು ತುಂಡಾಗಿದ್ದ ವಿದ್ಯುತ್ ಕಂಬ ತೆರವುಗೊಳಿಸಿ, ಶನಿವಾರ ವಿದ್ಯುತ್ ಸರಬರಾಜು ವ್ಯವಸ್ಥೆ ಸುಗಮಗೊಳಿಸಿದ್ದಾರೆ.