ದಿಡುಪೆ ಬಸ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಪ್ರಯಾಣದ ವ್ಯವಸ್ಥೆ ಅನುಕೂಲಕರವಾಗಿದೆಯಾದರೂ ಅಗತ್ಯಕ್ಕೆ ತಕ್ಕಷ್ಟು ಬಸ್ ಇಲ್ಲದಿರುವುದರಿಂದ ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಸ್ಥತಿ ನಿರ್ವಾಣವಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಮೆಟ್ಟಿಲುಗಳಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ಆತಂಕ ಮೂಡಿಸುತ್ತಿದೆ.
ದಿಡುಪೆ, ನೆರಿಯ, ಚಾರ್ವಾಡಿ, ಗಂಡಿಬಾಗಿಲು ಕಡೆಯಿಂದ ಬೆಳಗ್ಗೆ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಸಾವಿರಾರು ಮಂದಿ ಇದ್ದಾರೆ. ಇದೇ ರೀತಿ ಸಂಜೆ ಮರಳುವವರು ಕೂಡ. ಆದರೆ ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳು ಇಲ್ಲದಿರುವುದರಿಂದ ಇರುವ ಬಸ್‌ಗಳಲ್ಲಿ ನುಗ್ಗಿಕೊಂಡು, ನೇತಾಡಿಕೊಂಡು ಪ್ರಯಾಣಿಸಬೇಕಾಗಿದೆ.
ನೆರಿಯ, ಕಾಯರ್ತಡ್ಕ ಗಂಡಿಬಾಗಿಲು, ದೇವಗಿರಿ, ಕೊಯ್ಯೂರು, ಬೈಪಾಡಿ, ಬೆಳಾಲು, ದಿಡುವೆ ಸೇರಿದಂತೆ ತಾಲೂಕಿನ ಹಲವು ಗ್ರಾಮೀಣ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಪ್ರಮುಖ ಸಾರಿಗೆ ವ್ಯವಸ್ಥೆ. ಹೀಗಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಕೆಂಪು ಬಸ್ಸನ್ನೇ ಅವಲಂಬಿಸಬೇಕಾಗಿದೆ. ಬೆಳಗ್ಗೆ ಬೆಳ್ತಂಗಡಿ ಕಡೆಗೆ ಸೀಮಿತ ಸಂಖ್ಯೆಯ ಬಸ್‌ಗಳಿರುವುದರಿಂದ ಒಂದು ಬಸ್ ತಪ್ಪಿದರೆ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತಡವಾಗಿ ತಲುಪುವ ಪರಿಸ್ಥಿತಿ ಎದುರಾಗುತ್ತದೆ.
ಗ್ರಾಮೀಣ ಭಾಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಓಡಿಸಬೇಕು. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರ ಹೆಚ್ಚಿರುವ ವಾರ್ಗಗಳಲ್ಲಿ ಹೆಚ್ಚುವರಿ ಟ್ರಿಪ್‌ಗಳನ್ನು ವ್ಯವಸ್ಥೆ ವಾಡಬೇಕು. ಸಂಜೆ ಕೊನೆಯ ಬಸ್‌ಗಳ ನಡುವಿನ ಅಂತರವನ್ನು ಕಡಿಮೆ ವಾಡಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ರೂಪಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಸಂಜೆ ವೇಳೆಯೂ ಪರದಾಟ
ನೆರಿಯ ಭಾಗಕ್ಕೆ ಸಂಜೆ 5.10ಕ್ಕೆ ಒಂದು ಬಸ್ ಇದ್ದರೆ ಬಳಿಕ ಇರುವುದು 6.45ಕ್ಕೆ. ಮೊದಲ ಬಸ್ ತುಂಬಿ ತುಳುಕುತ್ತದೆ. ಅದು ತಪ್ಪಿದರೆ ಮನೆ ತಲುಪುವುದು ರಾತ್ರಿಯಾಗುತ್ತದೆ. ಅದೇ ರೀತಿ ಕಿಲ್ಲೂರು, ಬಂಗಾಡಿ, ಕೊಲ್ಲಿ ಭಾಗಗಳಿಗೂ ಸಂಜೆ 5.15ರ ಬಳಿಕ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ ಇಲ್ಲ. ಬೈಲಡ್ಕ ಸವಣಾಲು, ಶಿರ್ಲಾಲು ಭಾಗಕ್ಕೆ ಸಂಜೆ 5 ಗಂಟೆಗೆ ಕೊನೆಯ ಬಸ್. ದಿಡುಪೆ ಭಾಗದಲ್ಲಿ ಸಂಜೆ 5.30ಕ್ಕೆ ಮತ್ತು 6.45ಕ್ಕೆ ಕೊನೆಯ ಬಸ್ ಇರುವುದರಿಂದ ಶಾಲಾ-ಕಾಲೇಜು ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಒಂದೇ ಬಸ್ಸನ್ನು ಅವಲಂಬಿಸಬೇಕಾಗಿದೆ. ಹೀಗೆ ತಾಲೂಕಿನ ಅನೇಕ ಭಾಗಗಳಿಗೆ ಕೆಎಸ್ಸಾರ್ಟಿಸಿ ಬಸ್ಸುಗಳ ಕೊರತೆ ಇದೆ.
ಬೆಳಗ್ಗೆ-ಸಂಜೆ ಯಾತನಾಮಯ
ಜನದಟ್ಟಣೆಯ ಬೆಳಗ್ಗೆ ಮತ್ತು ಸಂಜೆ ಹೊತ್ತು ಬಸ್‌ನಲ್ಲಿ ಸ್ಥಳವಿಲ್ಲದಿದ್ದರೂ ಪ್ರಯಾಣಿಸುವ ಅನಿವಾರ್ಯತೆಯಿಂದ ವಿದ್ಯಾರ್ಥಿಗಳು ಬಾಗಿಲಿನ ಬಳಿ ನೇತಾಡಿಕೊಂಡು ಸಾಗುತ್ತಿರುವುದು ಸಾವಾನ್ಯವಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಜಾರುವಂತಿರುವ ಸಂದರ್ಭದಲ್ಲಂತೂ ಅಪಾಯ ಇನ್ನಷ್ಟು ಹೆಚ್ಚಾಗಿದ್ದು, ಪಾಲಕರು ಮಕ್ಕಳು ಮನೆಗೆ ಮರಳುವವರೆಗೆ ಭಯದಲ್ಲೇ ಇರುವಂತಾಗಿದೆ.
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಾಲೂಕಿನ ಗ್ರಾಮೀಣ ಭಾಗಗಳ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಿರುವಂತೆ ಹೆಚ್ಚುವರಿ ಬಸ್‌ಗಳನ್ನು ಆರಂಭಿಸಬೇಕಾಗಿದೆ.
ಜೀವಕ್ಕೆ ಬೆಲೆ ಕಟ್ಟಲಾಗದು. ವಿದ್ಯಾರ್ಥಿಗಳ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪಾಯ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಅಧಿಕಾರಿಗಳು ಗ್ರಾಮೀಣ ಭಾಗದ ರಸ್ತೆ, ಬಸ್ ನಿಲ್ದಾಣ, ಶಾಲಾ ವಾರ್ಗ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸುವ ಅಗತ್ಯ ಇದೆ.