ಉಡುಪಿ ಇಂಡಸ್ಟ್ರೀಯಲ್​ ಕೋ-ಆಪರೇಟಿವ್​ ಸೊಸೈಟಿ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಪ್ರಸಾದ್​ ಶೆಟ್ಟಿ ಕುತ್ಯಾರು ಉದ್ಘಾಟಿಸಿದರು. ಅರುಣಕುಮಾರ್​ ಶೆಟ್ಟಿ, ಬಿ. ಜಯಕರ್​ ಶೆಟ್ಟಿ ಇಂದ್ರಾಳಿ, ಅನೂಷಾ ಕೋಟ್ಯಾನ್​, ಎಂ. ಗಣೇಶ್​ ಕಿಣಿ, ಬಿಂದು ನಾಯರ್​ ಇತರರಿದ್ದರು. 
ಉಡುಪಿ

ಬ್ಯಾಂಕ್​ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ

ಸಂಘದ ಅಧ್ಯಕ್ಷ ಪ್ರಸಾದ್​ ಶೆಟ್ಟಿ ಕುತ್ಯಾರು ಉದ್ಘಾನೆ

ಉಡುಪಿ: ಉಡುಪಿ ಇಂಡಸ್ಟ್ರೀಯಲ್​ ಕೋ-ಆಪರೇಟಿವ್​ ಸೊಸೈಟಿ ಲಿ. ಕಿನ್ನಿಮುಲ್ಕಿ ಸಂಸ್ಥೆಯ ಸಿಬ್ಬಂದಿಗೆ ಮಣಿಪಾಲದ ಖಾಸಗಿ ಹೋಟೆಲ್​ನ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿತ್ತು. 
ಶಿರ್ವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್​ ಶೆಟ್ಟಿ ಕುತ್ಯಾರು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಅರುಣಕುಮಾರ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 
ಕರ್ನಾಟಕ ಇನ್​ಸ್ಟಿಟ್ಯೂಟ್​ ಆಫ್​ ಮೆನೇಜ್​ಮೆಂಟ್​ನ ಪ್ರೊ. ಬಿಂದು ನಾಯರ್​ ಅವರು 'ಟೋಟಲ್​ ಕ್ವಾಲಿಟಿ ಆಫ್​ ಮೆನೇಜ್​ಮೆಂಟ್​' ವಿಷಯ ಕುರಿತು ತರಬೇತಿ ನೀಡಿದರು. 
ಉಡುಪಿ ಜಿಲ್ಲಾ ಸಹಕಾರ ಯೂನಿಯನ್​ (ನಿ.)ನ ಅಧ್ಯಕ್ಷ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಅನೂಷಾ ಕೋಟ್ಯಾನ್​, ಸಂಸ್ಥೆಯ ಉಪಾಧ್ಯಕ್ಷ ಎಂ. ಗಣೇಶ್​ ಕಿಣಿ, ಹಿರಿಯ ನಿರ್ದೇಶಕ ನಾರಾಯಣ ಬಲ್ಲಾಳ್​, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್​ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.