ಟೋಲ್ ಸುಂಕ ವಿನಾಯಿತಿ ಆಗ್ರಹಿಸಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ವಿನಯ ಕುವಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಅಶೋಕ್ ಕುಮಾರ್ ಕೊಡವೂರು, ವೈ.ಸುಕುಮಾರ್, ನವೀನಚಂದ್ರ ಜೆ.ಶೆಟ್ಟಿ, ಕಿಶನ್ ಹೆಗ್ಡೆ ಮತ್ತಿತರರಿದ್ದರು.  
ಉಡುಪಿ

ರಸ್ತೆ ಅಭಿವೃದ್ಧಿಪಡಿಸದೆ ಟೋಲ್ ಸಂಗ್ರಹ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಹೆಜಮಾಡಿ ಹಳೇ ಎಂಬಿಸಿ ರಸ್ತೆಯಲ್ಲಿ ಟೋಲ್ ಸೋರಿಕೆ ನೆಪದಲ್ಲಿ ಪ್ರತ್ಯೇಕ ಟೋಲ್‌ಗೇಟ್ ನಿರ್ಮಿಸಲಾಗಿದೆ. ಆದರೆ ಈ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಇದುವರೆಗೂ ಕೈಗೊಂಡಿಲ್ಲ. ಹೆಜವಾಡಿ ಪೇಟೆ ಸಮೀಪದ ನಡ್ಸಾಲು ಗ್ರಾಮದ ವಾಹನ ಸವಾರರಿಗೂ ಹೆಜಮಾಡಿ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ ಟೋಲ್‌ಗೇಟ್‌ನಲ್ಲಿ ಯಾವುದೇ ಶುಲ್ಕ ವಿನಾಯಿತಿ ನೀಡಲಾಗುತ್ತಿಲ್ಲ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು.
ಹೆಜಮಾಡಿ ಹಳೇ ಎಂಬಿಸಿ ರಸ್ತೆಯಲ್ಲಿನ ಟೋಲ್‌ಗೇಟ್ ತೆರವು ಹಾಗೂ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ವಾಹನಗಳಿಗೆ ಟೋಲ್ ಸುಂಕ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್‌ನಿಂದ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸ್ಥಳೀಯ ವಾಹನ ಸವಾರರಿಗೆ ಪಾಸ್ ವ್ಯವಸ್ಥೆ ಕಲ್ಪಿಸಬೇಕು. ಸಾಸ್ತಾನ ಟೋಲ್ ಮಾದರಿಯಲ್ಲೇ ಸುಂಕ ವಿನಾಯಿತಿ ವ್ಯವಸ್ಥೆ ಜಾರಿಗೊಳಿಸಬೇಕು. 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಅನಂತ ಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುವಾರ್ ಕೊಡವೂರು, ಕಾಪು ಬ್ಲಾಕ್ ಅಧ್ಯಕ್ಷ ವೈ.ಸುಕು

ರ್, ಹೆಜವಾಡಿ ಬಿಲ್ಲವರ ಸಂ ಅಧ್ಯಕ್ಷ ಮೋಹನ್‌ದಾಸ್ ಹೆಜವಾಡಿ,

ಜಿ ಅಧ್ಯಕ್ಷ ಜಿನ್‌ರಾಜ್ ಬಂಗೇರ, ಮಹಾಲಿಂಗೇಶ್ವರ ದೇವಸ್ಥಾನ ಆಡಳಿತಕ ಮೊಕ್ತೇಸರ ದಯಾನಂದ್ ಹೆಜ್ಮಾಡಿ, ಕನ್ನಂಗಾರ್ ಜುವಾ ಮಸೀದಿ ಅಧ್ಯಕ್ಷ ಹಮೀದ್, ಪ್ರಮುಖರಾದ ನವೀನ್‌ಚಂದ್ರ ಜೆ.ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಗುಲಾಮ್ ಅಹಮದ್, ಅಬ್ದುಲ್ ಅಜೀಜ್ ಹೆಜ

ಡಿ, ಶರ್ಫುದ್ದೀನ್ ಶೇಖ್, ಪ್ರಶಾಂತ್ ಜತ್ತನ್ನ, ಜಿತೇಂದ್ರ ಪುರ್ಟಾಡೋ, ನವೀನಚಂದ್ರ ಸುವರ್ಣ, ರಮೀಝ್ ಹುಸೈನ್, ಪ್ರಭೋದ್‌ಚಂದ್ರ, ಕೃಷ್ಣ ಶೆಟ್ಟಿ, ನವೀನ್ ಎನ್.ಶೆಟ್ಟಿ, ಅಶ್ವಿನ್ ಕೋಟ್ಯಾನ್, ಸುಧೀರ್ ಕರ್ಕೇರ, ಮುಹಮ್ಮದ್ ನಿಯಾಜ್, ವಿಶಾಲ್ ಬಂಗೇರ, ದೀಕ್ಷಾ ಕೆ., ಶೇಕಬ್ಬ ಕೋಟೆ, ಮಹಮ್ಮದ್ ಶರೀಫ್, ವಿಠಲ್

ಸ್ಟರ್, ಸನಾ ಇಬ್ರಾಹಿಮ್, ಶಾಫಿ, ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.