ACCIDENT 
ಉಡುಪಿ

ಟಿಪ್ಪರ್ ಲಾರಿ ಚರಂಡಿಗೆ

ಪುತ್ತೂರು ಗ್ರಾಮಾಂತರ:

ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಮಂಜ ಸೇತುವೆಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸೈಡು ಕೊಡುವ ಯತ್ನದಲ್ಲಿ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿದೆ.

ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಸೈಡು ಕೊಡುವ ಯತ್ನದಲ್ಲಿ ಚಾಲಕನ ಹತೋಟಿ ಕಳಕೊಂಡ ಟಿಪ್ಪರ್ ಲಾರಿ ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.