ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ 'ಮಲಬಾರ್​ ವಿಶ್ವಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾದ ಹಿರಿಯ ಸಾಹಿತಿಗಳಾದ ಡಾ. ಭೈರಮಂಗಲ ರಾಮೇಗೌಡ, ಇಂದಿರಾ ಹಾಲಂಬಿ ಮತ್ತು ಜಯಪ್ರಕಾಶ್​ ಪುತ್ತೂರು. 
ಉಡುಪಿ

ಮೂವರು ಸಾಹಿತಿಗಳು 'ಮಲಬಾರ್​ ವಿಶ್ವಸಾಹಿತ್ಯ' ಪ್ರಶಸ್ತಿಗೆ ಆಯ್ಕೆ

* ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ ಪುರಸ್ಕಾರ

* ನ.8ರಂದು ಉಡುಪಿ ಶಾಖೆಯಲ್ಲಿ ಪ್ರದಾನ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ವತಿಯಿಂದ ಪ್ರದಾನ ಮಾಡಲಾಗುವ ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ 'ಮಲಬಾರ್​ ವಿಶ್ವಸಾಹಿತ್ಯ ಪ್ರಶಸ್ತಿ-2026'ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ (ಸಮಗ್ರ ಸಾಹಿತ್ಯ), ಉಡುಪಿಯ ಹಿರಿಯ ಸಾಹಿತಿ ಇಂದಿರಾ ಹಾಲಂಬಿ (ಮಕ್ಕಳ ಸಾಹಿತ್ಯ), ಡಿಆರ್​ಡಿಒ ಮಾಜಿ ಮುಖ್ಯ ಸಂಪರ್ಕಾಧಿಕಾರಿ ಮೈಸೂರಿನ ಜಯಪ್ರಕಾಶ್​ ಪುತ್ತೂರು (ಅನುವಾದ ಸಾಹಿತ್ಯ) ಆಯ್ಕೆಯಾದವರು.

ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ನ ಉಡುಪಿ ಶಾಖೆಯಲ್ಲಿ ನ.8ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಫಲಕ, ಬೆಳ್ಳಿ ಪದಕ ಹಾಗೂ ನಗದು 5 ಸಾವಿರ ರೂ.ನೊಂದಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.