ಕಾಸರಗೋಡು: ಹದಿನೇಳರ ಹರೆಯದ ಅಂಗವಿಕಲ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಕೋಟಿಕುಳಂ ರೈಲ್ವೆ ನಿಲ್ದಾಣ ಸಮೀಪದ ಸಾಲಿ ಯಾನೆ ಮುಹಮ್ಮದ್ ಸಾಲಿಹ್ (29), ಪೆರುಂಬಳ ಕೋಳಿಯಡ್ಕದ ಶೆರೀಫ್ ಕಡಪ್ಪಳ್ಳಂ ಯಾನೆ ಕೆ.ಪಿ.ಶರೀಫ್ (40), ಮೈಲಾಟಿ ಕುಟ್ಟಪ್ಪುನ್ನ ಕುರುಕನ್‌ಕುನ್ನು ನಿವಾಸಿ, ಪ್ರಸ್ತುತ ತಚ್ಚಂಗಾಡ್ ಅರಬಿಪಳ್ಳಿ ಸಮೀಪದಲ್ಲಿ ವಾಸವಿರುವ ಎ.ಟಿ.ಮುಹಮ್ಮದ್ ನೌಶಾದ್ (39) ಬಂಧಿತರು. ಎಂಬವರನ್ನು ಬೇಕಲ ಪೋಲೀಸರು ಬಂಧಿಸಿದ್ದಾರೆ.
ಬಂಧಿತರ ಪೈಕಿ ನೌಶಾದ್ ಹಾಗೂ ಶರೀಫ್ ಆಟೋ ಚಾಲಕರಾಗಿದ್ದು, ಮುಹಮ್ಮದ್ ಸಾಲಿಹ್ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಬಾಲಕಿಗೆ ಕಿರುಕುಳ ನೀಡಿರುವ ಬಗ್ಗೆ ಮಾಹಿತಿಯಂತೆ ಚೈಲ್ಡ್ ವೆಲ್ಫೇರ್ ಕಮಿಟಿ ನೀಡಿದ ವರದಿಯ ಆಧಾರದಲ್ಲಿ ಬೇಕಲ ಪೋಲಿಸರು 5 ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.