arrest 
ಉಡುಪಿ

ಎಂಡಿಎಂಎ ಸಾಗಿಸುತ್ತಿದ್ದ ಮೂವರು ಸೆರೆ

ಇಂದಿರಾ ಎನ್ ಕೆ
ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 1.899 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವ ಅಬಕಾರಿ ದಳ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ.
ಕಾಸರಗೋಡು ಪಟ್ಲ ನಿವಾಸಿ ಅಬ್ದುಲ್ ರೌಫ್, ಸುಳ್ಯ ನಿವಾಸಿ ಕೌಶಿಕ್, ಅಡೂರು ಪೇರಾಮರ ನಿವಾಸಿ ಮಹಮ್ಮದ್ ಜಸೀರ್ ಯು.ಕೆ. ಬಂಧಿತರು. ಕಾಸರಗೋಡು ಅಬಕಾರಿ ರೇಂಜ್ ಅಧಿಕಾರಿ ಅಫ್ಸಲ್ ಬಿ.ಕೆ. ನೇತೃತ್ವದ ತಂಡ ಸಂತೋಷ್ ನಗರದಲ್ಲಿ ಪ್ಯಾಟ್ರೋಲಿಂಗ್ ನಡೆಸುತ್ತಿದ್ದಾಗ ಕಾರನ್ನು ತಡೆದು ತಪಾಸಣೆ ಮಾಡಿದಾಗ ಎಂಡಿಎಂಎ ಪತ್ತೆಯಾಗಿದೆ.