(ಸಾಂದರ್ಭಿಕ ಚಿತ್ರ) 
ಉಡುಪಿ

ಆ.12ರಂದು ಮಣಿಪಾಲದಲ್ಲಿ 'ತಿರಂಗಾ ಯಾತ್ರೆ'

ಉಡುಪಿ

 ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

* ದೇಶಕ್ಕಾಗಿ ದೇಶಭಕ್ತರ ನಡಿಗೆ ಕಾರ್ಯಕ್ರಮ

ಉಡುಪಿ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಉಡುಪಿ ಭಾಗದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಆ.12ರಂದು ಮಧ್ಯಾಹ್ನ 3:30ಕ್ಕೆ 'ತಿರಂಗಾ ಯಾತ್ರೆ' (ದೇಶಕ್ಕಾಗಿ ದೇಶಭಕ್ತರ ನಡಿಗೆ) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.
ಮಣಿಪಾಲದ ಕೆನರಾ ಬ್ಯಾಂಕ್​ನ ಪ್ರಾದೇಶಿಕ ಕಚೇರಿಯ ಮುಂಭಾಗದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರದ ವಿವಿಧ ಗಣ್ಯರು ತಿರಂಗಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ತಿರಂಗಾ ಯಾತ್ರೆಯು ಮಣಿಪಾಲ ಕೆನರಾ ಬ್ಯಾಂಕ್​ನ ಪ್ರಾದೇಶಿಕ ಕಚೇರಿಯ ಮುಂಭಾಗದಿಂದ ಹೊರಟು ಟೈಗರ್​ ಸರ್ಕಲ್​, ಸಿಂಡಿಕೇಟ್​ ಸರ್ಕಲ್​ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮಾರ್ಗದಲ್ಲಿರುವ ಕಾಯಿನ್​ ಸರ್ಕಲ್​ ಬಳಿ ಸಮಾಪನಗೊಳ್ಳಲಿದೆ.
ಸಾರ್ವಜನಿಕರು, ದೇಶಭಕ್ತ ಬಂಧುಗಳು ಪಾಲ್ಗೊಂಡು ದೇಶಭಕ್ತಿಯ ಪ್ರತೀಕವಾದ ತಿರಂಗಾ ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.