ನರೇಂದ್ರಎಸ್.ಮರಸಣಿಗೆಹೆಬ್ರಿ/ರವೀಂದ್ರಕುಮಾರ್ ಕೋಟ
ಸಮುದಾಯಆರೋಗ್ಯ ಕೇಂದ್ರಗಳಲ್ಲಿರುವ ತಜ್ಞವೈದ್ಯರ ಹುದ್ದೆಯನ್ನು ಕಡಿತಗೊಳಿಸಿಅವರನ್ನು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆವರ್ಗಾಯಿಸುವುದು ಹಾಗೂ ಈ ಆರೋಗ್ಯಕೇಂದ್ರಗಳಿಗೆ ಎಂಬಿಬಿಎಸ್ವೈದ್ಯರನ್ನು ನೇಮಿಸುವ ಸರ್ಕಾರದನಿಲುವಿಗೆ ಸಾರ್ವಜನಿಕ ವಲಯದಲ್ಲಿಭಾರಿ ಆಕ್ರೋಶ ವ್ಯಕ್ತವಾಗಿದೆ.ಸಮುದಾಯಆರೋಗ್ಯ ಕೇಂದ್ರಗಳು ಗ್ರಾಮೀಣಭಾಗದ ಜನರಿಗೆ ವರದಾನವಾಗಿವೆ.ಹುದ್ದೆಕಡಿತವಾದರೆ ಇನ್ನು ಮುಂದೆ ಗ್ರಾಮೀಣಭಾಗದ ಜನರು ಹೆಚ್ಚಿನ ಆರೋಗ್ಯಸೇವೆಗೆ ದೂರದ ತಾಲೂಕು ಅಥವಾಜಿಲ್ಲಾಸ್ಪತ್ರೆಯನ್ನು ಅವಲಂಬಿಸಬೇಕಾದಪರಿಸ್ಥಿತಿ ಬರಲಿದೆ.
ಉಡುಪಿಜಿಲ್ಲೆಯಲ್ಲಿ ಆರು ಸಮುದಾಯ ಆರೋಗ್ಯಕೇಂದ್ರಗಳಿವೆ.ಬೈಂದೂರು,ಶಿರ್ವ,ಕೋಟ,ಬ್ರಹ್ಮಾವರ,ಹೆಬ್ರಿ,ನಿಟ್ಟೆಯಲ್ಲಿರುವಸಮುದಾಯ ಆರೋಗ್ಯ ಕೇಂದ್ರಗಳಲ್ಲಿರೋಗಿಗಳು,ಗರ್ಭಿಣಿಯರುಚಿಕಿತ್ಸೆ ಪಡೆಯುತ್ತಿದ್ದಾರೆ.ಈಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗತಜ್ಞರಿದ್ದು ಹೆರಿಗೆ ವಿಭಾಗಇರುವುದರಿಂದ ಹೋಬಳಿ ವ್ಯಾಪ್ತಿಯಜನರಿಗೆ ಅನುಕೂಲವಾಗುತ್ತಿತ್ತು.ಆದರೆಸರ್ಕಾರ ಹೊರಡಿಸಿದ ಆದೇಶದಿಂದಾಗಿಭವಿಷ್ಯದಲ್ಲಿ ಸಮುದಾಯ ಆರೋಗ್ಯಕೇಂದ್ರಗಳು ಪ್ರಾಥಮಿಕ ಆರೋಗ್ಯಕೇಂದ್ರಗಳಾಗಿ ಕೆಳದರ್ಜೆಗಿಳಿಯುವಸಾಧ್ಯತೆ ದಟ್ಟವಾಗಿದೆ.ಸರ್ಕಾರದಈ ನಡೆಗೆ ಸಾರ್ವಜನಿಕರಿಂದ ವಿರೋಧವ್ಯಕ್ತವಾಗಿದೆ.
ಸರ್ಕಾರಸಮುದಾಯ ಆರೋಗ್ಯ ಕೇಂದ್ರಗಳ ತಜ್ಞವೈದ್ಯರನ್ನು ವರ್ಗಾಯಿಸುವಪ್ರಕ್ರಿಯೆ ಕೈಬಿಟ್ಟು ಮೇಲ್ದರ್ಜೆಗೇರಿಸಿಇನ್ನಷ್ಟು ಸೌಲಭ್ಯ ಕಲ್ಪಿಸಬೇಕು.ಖಾಲಿಇರುವ ಹುದ್ದೆಗಳನ್ನು ಭರ್ತಿಮಾಡಿ ಗುಣಮಟ್ಟದ ಚಿಕಿತ್ಸೆ ಜನರಿಗೆಸಿಗುವಂತೆ ಮಾಡಬೇಕೆಂಬ ಆಗ್ರಹಕೇಳಿಬಂದಿದೆ.
ವೈದ್ಯರನ್ನುವರ್ಗಾವಣೆ ಮಾಡಿದಲ್ಲಿ ಹೆಬ್ರಿಹಾಗೂ ಬೈಂದೂರಿನ ಜನರು ತುರ್ತುಸಂದರ್ಭದಲ್ಲಿ ಬಹುದೂರದ ತಾಲೂಕು/ಜಿಲ್ಲಾಸ್ಪತ್ರೆಗೆಹೋಗಲು ಪರದಾಡಬೇಕಾಗುತ್ತದೆ.ಹೆಬ್ರಿತಾಲೂಕಿನ ನಾಡ್ಪಾಲು,ಕಬ್ಬಿನಾಲೆಗ್ರಾಮಗಳು ಜಿಲ್ಲಾಕೇಂದ್ರದಿಂದಐವತ್ತು ಕಿ.ಮೀ.ದೂರದಲ್ಲಿವೆ.ಸಮಸ್ಯೆಗಳನ್ನುಪರಾಮರ್ಶಿಸಿ ಜನರಿಗೆ ಸಮಸ್ಯೆಯಾಗದಂತೆಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಕೋಟಸಮುದಾಯ ಆರೋಗ್ಯ ಕೇಂದ್ರದಲ್ಲಿಕೆಲವು ವರ್ಷಗಳಿಂದ ಹೆರಿಗೆ ವಿಭಾಗಸೇರಿದಂತೆ ವಿವಿಧ ವಿಭಾಗಗಳುಕಾರ್ಯ ನಿರ್ವಹಿಸುತ್ತಿವೆ.ಆಸ್ಪತ್ರೆಗೆಬೇಕಾದ ಮೂಲ ಸೌಲಭ್ಯಗಳನ್ನು ಸ್ಥಳೀಯಉದ್ಯಮಿಗಳಾದ ಆನಂದ್ ಸಿ.ಕುಂದರ್ಮತ್ತಿತರ ದಾನಿಗಳು ಒದಗಿಸಿದ್ದಾರೆ.ಸಾಕಷ್ಟುಜನ ರೋಗಿಗಳು ದಿನನಿತ್ಯ ಆರೋಗ್ಯಸೇವೆ ಪಡೆಯುತ್ತಿದ್ದಾರೆ.ಸೌಲಭ್ಯಗಳಿದ್ದರೂವೈದ್ಯರನ್ನು ವರ್ಗಾಯಿಸುವ ಸರ್ಕಾರದನಿಯಮದಿಂದ ಗ್ರಾಮೀಣ ಜನರು ಗುಣಮಟ್ಟದಚಿಕಿತ್ಸೆಯಿಂದ ವಂಚಿತರಾಗಲಿದ್ದಾರೆ.
ಸರ್ಕಾರದನಿಯಮದ ಪ್ರಕಾರ ಸಮುದಾಯ ಆಸತ್ರೆಯಲ್ಲಿಸರಾಸರಿ 30ಹೆರಿಗೆಯಾಗಬೇಕು.ಪ್ರಸ್ತುತಸಮುದಾಯ ಆರೋಗ್ಯ ಕೇಂದ್ರಗಳಲ್ಲಿಸರಾಸರಿ 15ರಿಂದ20ಹೆರಿಗೆಆಗುತ್ತಿದೆ.ಅಲ್ಲದೆಕೆಲವು ಸಮುದಾಯ ಆರೋಗ್ಯ ಕೇಂದ್ರಗಳುಪ್ರಗತಿ ಸಾಧಿಸಿದ ಕಾರಣ,ಇಲ್ಲಿರುವತಜ್ಞ ವೈದ್ಯರನ್ನು ತಾಲೂಕು ಅಥವಾಜಿಲ್ಲಾ ಆಸ್ಪತ್ರೆಗೆ ವರ್ಗಾವಣೆಮಾಡುವುದರಿಂದ ಜನರಿಗೆ ಉತ್ತಮಸೇವೆ ನೀಡಬಹುದು.ಮುಖ್ಯವಾಗಿಕೆಲ ವೈದ್ಯರು ಹಲವಾರು ವರ್ಷಗಳಿಂದಒಂದೇ ಪ್ರದೇಶದಲ್ಲಿದ್ದಾರೆ.ವರ್ಗಾವಣೆಮೂಲಕ ಇಂಥ ವೈದ್ಯರ ಮೇಲೆ ನಿಯಂತ್ರಣಹೊಂದುವುದೂ ಇಲಾಖೆಯ ಉದ್ದೇಶೆ.ಈಗಿರುವಇರುವ ವೈದ್ಯರನ್ನು ವರ್ಗಾವಣೆಮಾಡಿ ಆರೋಗ್ಯ ಕೇಂದ್ರಗಳಿಗೆಎಂಬಿಬಿಎಸ್ ವೈದ್ಯರನ್ನು ನೇಮಕಮಾಡುವುದಾಗಿ ಹೇಳಿದೆ.ಆದರೆಅದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆಂಬಪ್ರಶ್ನೆ ಸಾರ್ವಜನಿಕರಲ್ಲಿದೆ.
ಹೆಬ್ರಿಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗತಜ್ಞರು,ಮಕ್ಕಳತಜ್ಞರು,ಹಿರಿಯವೈದ್ಯಾಧಿಕಾರಿ ಹುದ್ದೆಗಳು ಖಾಲಿಇವೆ.ಅರಿವಳಿಕೆತಜ್ಞರು ವಾರದಲ್ಲಿ ಎರಡು ಬಾರಿಬರುತ್ತಾರೆ.ಪೂರ್ಣಾವಧಿಯಲ್ಲಿದಂತ ವೈದ್ಯರು ಆಸ್ಪತ್ರೆಯಲ್ಲಿಕಾರ್ಯ ನಿರ್ವಹಿಸುತ್ತಾರೆ.ಮುಂದಿನದಿನಗಳಲ್ಲಿ ಖಾಲಿ ಹುದ್ದೆಗಳನ್ನುಭರ್ತಿ ಮಾಡಬಹುದೆಂಬ ನಿರೀಕ್ಷೆಜನರಲ್ಲಿತ್ತು.ಆದರೆಈಗ ಸರ್ಕಾರದ ಆದೇಶ ನಿರೀಕ್ಷೆಯನ್ನುಹುಸಿಗೊಳಿಸಿದ್ದು,ಹುದ್ದೆಗಳನ್ನುಕಡಿತಗೊಳಿಸದಂತೆ ಜನರು ಮನವಿಮಾಡಿದ್ದಾರೆ.
ಕೋಟಸಮುದಾಯ ಆರೋಗ್ಯ ಕೇಂದ್ರದಲ್ಲಿಸ್ತ್ರೀರೋಗ ತಜ್ಞರು,ಅರವಳಿಕೆತಜ್ಞರು,ಮಕ್ಕಳತಜ್ಞರು,ದಂತವೈದ್ಯರು,ಆಯುಷ್ಹಾಗೂ ಅಸಾಂಕ್ರಾಮಿಕ ವೈದ್ಯರುಇದ್ದಾರೆ.ಹಿರಿಯವೈದ್ಯಾಧಿಕಾರಿಗಳ ಕೊರತೆ ಇದೆ.ಒಂದುಆಂಬುಲೆನ್ಸ್ ಇದೆ.44 ಹುದ್ದೆಯಲ್ಲಿ26ಹುದ್ದೆಗಳುಖಾಲಿ ಇದ್ದು,ಒಟ್ಟು18ಸಿಬ್ಬಂದಿಕಾರ್ಯನಿರ್ವಹಿಸುತ್ತಿದ್ದಾರೆ.ಗುತ್ತಿಗೆಆಧಾರದಲ್ಲಿ 20ಮಂದಿಯನ್ನುನೇಮಕ ಮಾಡಲಾಗಿದೆ.17 ವಿವಿಧವಿಭಾಗದ ಸಿಬ್ಬಂದಿ ಹುದ್ದೆ ಖಾಲಿಇದೆ.ಪ್ರತಿದಿನ100ಕ್ಕೂಅಧಿಕ ರೋಗಿಗಳು ಇಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.ಇವರಲ್ಲಿಮಹಿಳೆಯರು,ವಯೋವೃದ್ಧರೇಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಜನರಿಗೆ ಗುಣಮಟ್ಟದ ಸೇವೆಯನ್ನು ನೀಡಲು ಇಲಾಖೆ ಯೋಜನೆ ರೂಪಿಸಿದೆ. ಕೆಲವರು ಅನೇಕ ವರ್ಷಗಳಿಂದ ಒಂದೇ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾರೆ. ಇಂದು ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಾಗಿದೆ. ತಜ್ಞ ವೈದ್ಯರ ಅಗತ್ಯವಿರುವುದರಿಂದ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಇಲಾಖೆ ಈ ಕ್ರಮ ಕೈಗೊಂಡಿದೆ.
ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನೋಡಿದ್ದೇವೆ. ಆದರೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವಿವಿಧ ವಿಭಾಗಗಳನ್ನು ಮುಚ್ಚುವ ಸರ್ಕಾರದ ಹುನ್ನಾರ ಸರಿಯಲ್ಲ. ಈ ಆದೇಶವನ್ನು ತಡೆಹಿಡಿದು ಇನ್ನಷ್ಟು ಅಭಿವೃದ್ಧಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.
ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಿ ಇಲ್ಲಿನ ಸೌಲಭ್ಯಗಳನ್ನು ಕಡಿತಗೊಳಿಸುವುದು ಸರಿಯಲ್ಲ. ಈ ಬಗ್ಗೆ ಸ್ಥಳೀಯ ಶಾಸಕರು, ಸಂಸದರ ಮೂಲಕ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ಆದೇಶ ವಾಪಸ್ ಪಡೆದು ಆರೋಗ್ಯ ಕೇಂದ್ರಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಒತ್ತಡ ಹೇರಲಾಗಿದೆ.