ಉಡುಪಿಯ ಡಾ. ಜಿ.ಶಂಕರ ಕಾಲೇಜ್​ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಡಾ. ನಿಕೇತನಾ ಮಾತನಾಡಿದರು. ಶರದ್​ ಎಸ್​., ಡಾ. ಶ್ರೀಮತಿ ಅಡಿಗ, ಶರತಕುಮಾರ, ಸಂತೋಷ ಪ್ರಭು ಇದ್ದರು. 
ಉಡುಪಿ

ಸಾಮಾಜಿಕ ವಲಯಗಳಲ್ಲಿದೆ ವಿಪುಲ ವೃತ್ತಿ ಅವಕಾಶ

* ಮಾಜಿ ರಿಜಿಸ್ಟ್ರಾರ್​ ಶರದ್​ ಎಸ್​. ಅಭಿಪ್ರಾಯ

* ಡಾ. ಜಿ.ಶಂಕರ ಕಾಲೇಜ್​ನಲ್ಲಿ ವಿಶೇಷ ಉಪನ್ಯಾಸ

ಉಡುಪಿ: ಸಾಮಾಜಿಕ ವಲಯಗಳಾದ ಸರ್ಕಾರಿ, ಸರ್ಕಾರೇತರ ಸಂಸ್ಥೆ, ದತ್ತಿ ಸಂಸ್ಥೆ, ಸಮುದಾಯ ಆಧಾರಿತ ಸಂಘಟನೆ, ಕಾರ್ಪೊರೇಟ್​ ಸಾಮಾಜಿಕ ಹೊಣೆಗಾರಿಕೆ ವಿಭಾಗ, ನೀತಿ ಸಂಶೋಧನಾ ಸಂಸ್ಥೆ, ಉದ್ಯಮಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಯುವಜನರಿಗೆ ವಿಪುಲ ಉದ್ಯೋಗಾವಕಾಶ ಇದೆ ಎಂದು ಬೆಂಗಳೂರಿನ ಅಜೀಂ ಪ್ರೇಮ್​ಜಿ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್​ ಶರದ್​ ಎಸ್​. ಅಭಿಪ್ರಾಯಪಟ್ಟರು.

ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಉದ್ಯೋಗ ಕೋಶದ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ವಲಯದಲ್ಲಿ ವೃತ್ತಿ ಅವಕಾಶಗಳು ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಹಿತಾಸಕ್ತಿ ಮುಖ್ಯ

ವಿದ್ಯಾರ್ಥಿಗಳು ಕೌಶಲ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜಮುಖಿ ವೃತ್ತಿ ಜೀವನ ರೂಪಿಸಿಕೊಳ್ಳಬೇಕು. ಈ ವಲಯವು ಲಾಭ ಗಳಿಕೆಯ ಉದ್ದೇಶಕ್ಕಿಂತ ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜದ ಕಲ್ಯಾಣವೇ ಪ್ರಮುಖವಾಗಿರುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.

ಕಾಲೇಜ್​ನ ಪ್ರಾಂಶುಪಾಲೆ ಡಾ. ನಿಕೇತನಾ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕಿ ಡಾ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು. ಉದ್ಯೋಗ ಕೋಶದ ಸಂಯೋಜಕರಾದ ಶರತಕುಮಾರ ಹಾಗೂ ಸಂತೋಷ ಪ್ರಭು ಸಹಕರಿಸಿದರು.