ಬೆಳ್ತಂಗಡಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. 
ಉಡುಪಿ

ಕಳ್ಳತನ ಆರೋಪಿ ಸ್ಥಳ ಮಹಜರು

ಬೆಳ್ತಂಗಡಿ: ಮೂರು ಮಾರ್ಗದ ಬಳಿಯಿಂದ ಮಾತೃಶ್ರೀ ಹೋಟೆಲ್ ಹಾಗೂ ಕೋರ್ಟ್ ರಸ್ತೆಯವರೆಗೆ 11 ಕಡೆ ಮೇ 19ರಂದು ತಡರಾತ್ರಿ ಕಳ್ಳತನ ನಡೆಸಿದ್ದ ಅಂತರ್‌ರಾಜ್ಯ ಕಳ್ಳನನ್ನು ಬಂಧಿಸಿರುವ ಬೆಳ್ತಂಗಡಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ತಮಿಳುನಾಡು ಜಿಲ್ಲೆಯ ಕೊಯಮುತ್ತೂರಿನ ಜಯಕುಮಾರ್(55)ನನ್ನು ಮಂಗಳೂರು ಜೈಲಿನಿಂದ ಸೋಮವಾರ ಬೆಳಗ್ಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್‌ಐ ಸಿಕಂದರ್ ಪಾಷ ಸೋಮವಾರ ಸಂಜೆ ಕಳ್ಳತನ ನಡೆಸಿದ ಸುತ್ತಮುತ್ತಲಿನ 5 ಘಟನಾ ಸ್ಥಳ ಗುರುತಿಸಿ ಮಹಜರು ನಡೆಸಲಾಯಿತು. ಆರೋಪಿ ಉಜಿರೆಯಲ್ಲಿಯೂ ಕಳ್ಳತನ ನಡೆಸಿದ್ದು ಇನ್ನಷ್ಟು ಸ್ಥಳಗಳಲ್ಲಿ ಮಹಜರು ನಡೆಸಲು ಪೊಲೀಸರು ಮುಂದಾಗಿದ್ದಾರೆ.