Theft 
ಉಡುಪಿ

ಕಳವು ಆರೋಪಿ ಬಂಧನ

ಇಂದಿರಾ ಎನ್ ಕೆ

ಕಾಸರಗೋಡು: ಅಗಲ್ಪಾಡಿ ಸಮೀಪದ ವಾರ್ಪನಡ್ಕದ ಗೋಪಾಲಕೃಷ್ಣ ಭಜನಾ ಮಂದಿರದ ಹಿಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗುಳಿಗ ದೈವದ ಕಟ್ಟೆಯ ಕಾಣಿಕೆಹುಂಡಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆದೂರು ಪಯಂಗಾಡಿ ನಿವಾಸಿ ವಿ.ಪಿ.ಸಾಬಿತ್(36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಬ್ರಂಗಳದ ಪದ್ಮಾರ್ ನಿವಾಸಿ ರಮೇಶ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ಕಾರಿನಲ್ಲಿ ಬಂದು ಕಾಣಿಕೆ ಹುಂಡಿ ಕಳವುಗೈದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈತ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.