ಬಂಟ್ವಾಳ: ತಾಲೂಕಿನ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಳ್ಳಿಯ ಪೂಜಾ ಸಾಮಗ್ರಿಗಳು, ಕೊಪ್ಪರಿಗೆ, 10 ದೀಪಗಳು, 10 ಹಿತ್ತಾಳೆ ಗಿಂಡಿಗಳು, 5 ಹರಿವಾಣ, 2 ತಾಮ್ರದ ಕೊಡಪಾನ ಹಾಗೂ ಪಾತ್ರೆ ಸಹಿತ ಕೆಲವು ಸ್ಟೀಲ್ ಸಾಮಗ್ರಿಗಳನ್ನು ಕಳವು ಮಾಡಿದ್ದು, ಕಳುವಾದ ವಸ್ತುಗಳ ಒಟ್ಟು ಮೌಲ್ಯ 57 ರೂ. ಸಾವಿರ ಎಂದು ಅಂದಾಜಿಸಲಾಗಿದೆ.
ಮೂರು ಮಂದಿ ಕಳ್ಳರು ಗೋಣಿ ಚೀಲದಲ್ಲಿ ವಸ್ತುಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ದೇಗುಲದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಸ್ಥಾನದ ಸುನಿಲ್ ಕುಮಾರ್ ಕೆ.ಎನ್. ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.