ಉಡುಪಿ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗಣೇಶ ಅಮೀನಗಡ ಅವರಿಗೆ 'ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ' ನೀಡಲಾಯಿತು. ಡಾ. ನಿ.ಬೀ. ವಿಜಯ ಬಲ್ಲಾಳ, ಡಾ.ತಲ್ಲೂರು ಶಿವರಾಮ ಶೆಟ್ಟಿ, ಪೂರ್ಣಿಮಾ, ಪ್ರೊ.ಅನಿತಾ ಪ್ರಭಾತ, ಭಾಸ್ಕರ ರಾವ್​ ಕಿದಿಯೂರು, ಎನ್​. ರಾಜಗೋಪಾಲ ಬಲ್ಲಾಳ, ಪ್ರದೀಪಚಂದ್ರ ಕುತ್ಪಾಡಿ ಇತರರಿದ್ದರು. 
ಉಡುಪಿ

ರಂಗಭೂಮಿಗೆ ಬೇಕಿದೆ ಸೂಕ್ತ ಉತ್ತೇಜನ

* ಡಾ. ನಿ.ಬೀ.ವಿಜಯ ಬಲ್ಲಾಳ ಅಭಿಪ್ರಾಯ

* 'ಅಂಬಾತನಯ ಮುದ್ರಾಡಿ' ಪ್ರಶಸ್ತಿ ಪ್ರದಾನ

ಉಡುಪಿ: ರಂಗಭೂಮಿ ಕಲೆಗೆ ಪ್ರಾಚೀನ ಇತಿಹಾಸವಿದೆ. ನಾಟಕಗಳ ಮೂಲಕವೇ ಜನರಿಗೆ ಯಾವುದು ಸರಿ? ಯಾವುದು ತಪ್ಪು ಎಂಬ ಕಲ್ಪನೆ ಮೂಡುವಂತೆ ಮಾಡಿ ಹಿಂದಿನ ಕಾಲದಲ್ಲೇ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡುತ್ತಿತ್ತು. ಇತ್ತೀಚೆಗೆ ಆಧುನಿಕ ಕಲೆಗಳ ಭರಾಟೆಯಿಂದ ರಂಗಭೂಮಿ ಕಳೆಗುಂದಿದ್ದು, ಈ ಕ್ಷೇತ್ರಕ್ಕೆ ಸೂಕ್ತ ಉತ್ತೇಜನ, ಪೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಅಭಿಪ್ರಾಯಪಟ್ಟರು.

ಉಡುಪಿ ಅಂಬಲಪಾಡಿ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಂಗಭೂಮಿ ಉಡುಪಿ ವತಿಯಿಂದ ದಿ. ನಿ.ಬೀ. ಅಣ್ಣಾಜಿ ಬಲ್ಲಾಳ ಸ್ಮರಣಾರ್ಥ ಶನಿವಾರ (ನ.21) ಆಯೋಜಿಸಿದ್ದ ಅಂಬಲಪಾಡಿ ನಾಟಕೋತ್ಸವದಲ್ಲಿ ರಂಗತಜ್ಞ, ಸಾಹಿತಿ ಗಣೇಶ ಅಮೀನಗಡ ಅವರಿಗೆ 'ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ' ಪ್ರದಾನಿಸಿ ಮಾತನಾಡಿದರು.

ಉಡುಪಿ ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ವಿದ್ಯೋದಯ ಪಬ್ಲಿಕ್​ ಸ್ಕೂಲ್​ನ ಪ್ರಾಂಶುಪಾಲೆ ಅನಿತಾ ಪ್ರಭಾತ ಮಾತನಾಡಿದರು.

ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ ರಾವ್​ ಕಿದಿಯೂರು, ಎನ್​. ರಾಜಗೋಪಾಲ ಬಲ್ಲಾಳ, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ವಿಜಯಕುಮಾರ ಮುದ್ರಾಡಿ ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ಗಿರೀಶ ತಂತ್ರಿ ಸ್ವಾಗತಿಸಿದರು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೀನಾಸಂ ತಿರುಗಾಟ ತಂಡದಿಂದ 'ಪಾದುಕಾ ಕಿರೀಟ' ನಾಟಕ ಪ್ರದರ್ಶನಗೊಂಡಿತು.