ಬೈಂದೂರು ಶಾರದಾ ವೇದಿಕೆಯಲ್ಲಿ ಲಾವಣ್ಯದ ರಂಗಶ್ರೀ ರಂಗ ಹಬ್ಬ-2026ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಕೊಂಕಣಿ ರಂಗಭೂಮಿ ನಿರ್ದೇಶಕ ನಾಯ್ಕನಕಟ್ಟೆ ಶ್ರೀಸ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವೈ.ಮಂಗೇಶ ಶ್ಯಾನುಭಾಗ್, ಐ.ನಾರಾಯಣ, ನರಸಿಂಹ ಬಿ.ನಾಯಕ್ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ರಂಗಭೂಮಿಯಿಂದ ಸುಖ, ದುಃಖ ಅಭಿವ್ಯಕ್ತಿ ಸಾಧ್ಯ

ಬೈಂದೂರು: ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ ದುಖಃವನ್ನು ಮನೋಜ್ಞವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಸಾಧ್ಯ ಎಂದು ವಕೀಲ ವೈ.ಮಂಗೇಶ ಶ್ಯಾನುಭಾಗ್ ಹೇಳಿದರು.
ಬೈಂದೂರು ಶಾರದಾ ವೇದಿಕೆಯಲ್ಲಿ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ.ಯು.ಉಪ್ಪುಂದ ಶ್ರೀನಿವಾಸ ಪ್ರಭು ಅವರ ಸ್ಮರಣಾರ್ಥ ನಾಲ್ಕು ದಿನಗಳ ರಂಗಶ್ರೀ ರಂಗ ಹಬ್ಬ-2026ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಜಿಲ್ಲಾ ಸಹಾಯಕ ಪ್ರಾಂತಪಾಲ ಐ.ನಾರಾಯಣ ಅಧ್ಯಕ್ಷತೆ ವಹಿಸಿ, ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ರಂಗಶಿಕ್ಷಣ ನೀಡುವುದು ಅಗತ್ಯ. ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ನಿಜ ಜೀವನದ ದುವ್ಮಾನಗಳನ್ನು ಬಿಂಬಿಸುವ ನಾಟಕಗಳು ಬದುಕಿನ ಅರಿವು ಮೂಡಿಸುತ್ತವೆ ಎಂದರು.
ಕೊಂಕಣಿ ರಂಗಭೂಮಿ ನಿರ್ದೇಶಕ ನಾಯ್ಕನಕಟ್ಟೆ ಶ್ರೀಸ ಭಟ್ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಕೆ., ಶಿರೂರು ಡಾಟ್.ಕಾಮ್ ವ್ಯವಸ್ಥಾಪಕ ಗಿರೀಶ್ ಶಿರೂರು, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಚೈತ್ರಾ ಸತೀಶ್ ಉಪಸ್ಥಿತರಿದ್ದರು. ಲಾವಣ್ಯ ಕಾರ್ಯದರ್ಶಿ ಎಚ್.ವಿಶ್ವನಾಥ ಆಚಾರ್ಯ ಸ್ವಾಗತಿಸಿದರು. ಶ್ರೀಧರ ವಸ್ರೆ ವಂದಿಸಿದರು. ಸುಬ್ರಹ್ಮಣ್ಯ ಜಿ. ನಿರೂಪಿಸಿದರು.

ಸೌಂದರ್ಯ ಪ್ರಜ್ಞೆಯಿಲ್ಲದ ವ್ಯಕ್ತಿ ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಇಂಥವರ ಬಗ್ಗೆ ಜಾಗರೂಕತೆಯಿಂದಿರಬೇಕು. ಇಂದಿನ ದೃಶ್ಯ ಮಾಧ್ಯಮಗಳು ಮನೋರಂಜನೆ ಹೆಸರಿನಲ್ಲಿ ಭ್ರಷ್ಟವಾಗುತ್ತಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ ಎನ್ನುವ ಅಪವಾದವಿದೆ. ಆದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮಗಳನ್ನು ಸಂಟಿಸಿದಾಗ ಜನ ಖಂಡಿತವಾಗಿಯೂ ಆಸ್ವಾದಿಸುತ್ತಾರೆ..