ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಡೆದ ಹಿಂದೂ ಧರ್ಮ ಸಭೆಯಲ್ಲಿ ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ ಮಾತನಾಡಿದರು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಸಾಯಿ ಈಶ್ವರ್ ಗುರೂಜಿ, ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾ, ಹರಿಪ್ರಸಾದ್ ರೈ, ಮಹೇಶ್ ಎನ್.ಅಂಚನ್, ಕೆ.ವಿಜಯ್ ಕುಮಾರ್ ಕೊಡವೂರು, ಯಜ್ಞನಾರಾಯಣ ಭಟ್, ಭಾಗೀರಥ್ ಜಿ., ಜಯಂತ್ ಕೋಟ್ಯಾನ್ ಮತ್ತಿತರರಿದ್ದರು. 
ಉಡುಪಿ

ಯುವ ಜನಾಂಗಕ್ಕೆ ಸಂಸ್ಕಾರ ಪಾಠ ಅಗತ್ಯ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಅಕ್ಷರ ಕಲಿಯಲು ಪಡುವ ಶ್ರಮಕ್ಕೆ ಸಮಾನವಾಗಿ ಸಂಸ್ಕಾರವನ್ನೂ ಯುವ ಜನಾಂಗಕ್ಕೆ ಕಲಿಸಿರಿ. ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ತಪಸ್ಸಿನ ಫಲ, ಭಕ್ತರ ಶ್ರದ್ಧಾಭಕ್ತಿಯ ಫಲವಾಗಿ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣನ ಏಕಶಿಲಾಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಮೂಲಕ ಆಂಜನೇಯ ಚಿರಂಜೀವಿಯಾಗಿ ನೆಲೆಸುವಂತಾಗಿದೆ ಎಂದು ಬೆಂಗಳೂರು ಸಿದ್ಧಿವಿನಾಯಕ ಶರಭೇಶ್ವರ ಪೀಠದ ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ ಹೇಳಿದರು.
ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್, ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಈಶ್ವರ್ ಗುರೂಜಿ ಮಾರ್ಗದರ್ಶನದಲ್ಲಿ ಗುರುವಾರ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣನ ಶಿಲಾಮೂರ್ತಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಹಿಂದೂ ಧರ್ಮ ಸಭೆಯಲ್ಲಿ ಮಾತನಾಡಿದರು.
ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿದರು. ಶಿಲ್ಪಿಗಳನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿದರು. ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಿಪೀಠದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಎನ್.ಅಂಚನ್, ಉಡುಪಿ ನಗರಸಭೆ ಮಾಜಿ ಸದಸ್ಯರಾದ ಕೆ.ವಿಜಯ್ ಕುಮಾರ್ ಕೊಡವೂರು, ಯಜ್ಞನಾರಾಯಣ ಭಟ್ ವೇಣೂರು, ಬೆಳ್ತಂಗಡಿ ಶ್ರೀ ಗುರುದೇವ ಸಹಕಾರ ಸಂಘ ಅಧ್ಯಕ್ಷ ಭಾಗೀರಥ್ ಜಿ., ಬಿಜೆಪಿ ದ.ಕ. ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಟ್ರಸ್ಟಿಗಳಾದ ವಿಶ್ವನಾಥ ಸುವರ್ಣ, ಕಿರಣ್ ಜೋಗಿ ಮಂಗಳೂರು, ಸತೀಶ್ ದೇವಾಡಿಗ, ಪ್ರಮುಖರಾದ ಅರ್ಜುನ್ ಭಂಡಾರ್ಕರ್, ಗಣೇಶ್ ಶಿಲ್ಪಿ, ಇಂದುಶೇಖರ ಸುವರ್ಣ, ಶ್ರೀ ಮುಖ್ಯಪ್ರಾಣ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಅಭಿರಾಜ್ ಎಂ.ಸುವರ್ಣ, ಗೌರವಾಧ್ಯಕ್ಷರಾದ ರಾಮ ಪೂಜಾರಿ, ವೀಣಾ ಎಸ್.ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಶ್ರೀ ದ್ವಾರಕಾಮಾಯಿ ಮಠ ಟ್ರಸ್ಟ್ ಟ್ರಸ್ಟಿ ಗೀತಾಂಜಲಿ ಎಂ.ಸುವರ್ಣ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮ

ಶ್ರೀ ಸಾಯಿ ಈಶ್ವರ್ ಗುರೂಜಿ ಮಾರ್ಗದರ್ಶನದಲ್ಲಿ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣನ ಏಕಶಿಲಾಮೂರ್ತಿ ಪ್ರತಿಷ್ಠಾಪನೆ, ನಿತ್ಯಾನಂದ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ, ಮಹಾಪೂಜೆ, ಪಲ್ಲಪೂಜೆ ಕ್ಷೇತ್ರದ ತಂತ್ರಿಗಳಾದ ಮುಂಬೈನ ದೇವದಾಸ್ ತಂತ್ರಿ ನೇತೃತ್ವದಲ್ಲಿ ನೆರವೇರಿತು. ಶ್ರೀ ಮುಖ್ಯಪ್ರಾಣ ಶಿಲಾ ಮೂರ್ತಿ ಪ್ರತಿಷ್ಠಾಪನಾ ಸಮಿತಿ, ಶ್ರೀ ಸನಾತನ ಸೇವಾದಳ, ಆಡಳಿತ ಮಂಡಳಿ ಮತ್ತಿತರರು ಉಪಸ್ಥಿತರಿದ್ದರು.