ಉಡುಪಿ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಸಂಸ್ಕೃತಿ, ಸಂಪ್ರದಾಯವೂ ಸಹ ವಿಶೇಷತೆ ಹೊಂದಿದೆ. ನವರಾತ್ರಿ ಸಂದರ್ಭದಲ್ಲಿ ಗುಜರಾತಿಗಳ ದಾಂಡಿಯಾ ಹಾಗೂ ಗರ್ಬಾ ನೃತ್ಯ ವಿಶಿಷ್ಟವಾಗಿದ್ದು, ಉಡುಪಿ ಭಾಗದಲ್ಲಿರುವ ಈ ಸಮುದಾಯದವರ ನೃತ್ಯವೂ ನಮ್ಮ ನವರಾತ್ರಿಗೆ ವಿಶೇಷ ಮೆರಗು ನೀಡುತ್ತವೆ. ಸಮಾಜದಲ್ಲಿ ಸ್ನೇಹ, ಸೌಹಾರ್ದ ಬೆಳೆಸಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಮಣಿಪಾಲದ ಹುಡ್ಕೋ ಕಾಲನಿಯಲ್ಲಿರುವ ಉದ್ಯಾನವನದಲ್ಲಿ ಓಂ ಫ್ರೆಂಡ್ಸ್ ಮಣಿಪಾಲ ವತಿಯಿಂದ ದಸರಾ ನಿಮಿತ್ತ ಆಯೋಜಿಸಿದ್ದ ಮಣಿಪಾಲ ದಾಂಡಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ನಿತಿನ್ ಪೈ ಅವರನ್ನು ಸನ್ಮಾನಿಸಲಾಯಿತು. ಬಳಿಕ ಗುಜರಾತಿ ಸಮಾಜಿಗರು ನಡೆಸಿಕೊಟ್ಟ ಸಾಂಪ್ರದಾಯಿಕ ದಾಂಡಿಯಾ ಹಾಗೂ ಗರ್ಬಾ ನೃತ್ಯ, ಸಂಗೀತ ಜನಮನ ಸೆಳೆದವು. 8 ದಾಂಡಿಯಾ ತಂಡಗಳು ಭಾಗವಹಿಸಿದ್ದವು. ತ್ರಿಜಲ್ ಪ್ರಭು ಅವರು ಡ್ರಮ್ಸ್ ನುಡಿಸಿ ಕಾರ್ಯಕ್ರಮದ ಮರಗು ಹೆಚ್ಚಿಸಿದರು.
ದಿನೇಶ ಅಮೀನ್, ದೀಪಕ ಕಿಣಿ, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ, ದೇವೇಂದ್ರ ಪ್ರಭು, ದಿನೇಶ ಶೆಟ್ಟಿ ಹೆರ್ಗ, ನರಸಿಂಹ ಮೂರ್ತಿ, ಪಿ.ಜಿ. ಪಂಡಿತ, ಸಿ.ಎಸ್. ಉಮಾಪತಿ, ಕೃಷ್ಣ ಕುಲಾಲ್, ಉಮೇಶ ಸಾಲ್ಯಾನ್, ವಿದುಷಿ ಡಾ. ಉಷಾ ಹೆಬ್ಬಾರ, ವಿನಯ ಕಾಮತ, ಹರೀಶ ಹೆಬ್ರಿ, ಸಚಿನ ಕಾಮತ, ನಿತಿನ್ ಪೈ, ಕೌಶಿಕ ಹೆಬ್ಬಾರ, ಪದ್ಮರಾಜ ಪ್ರಭು, ಸಂತೋಷ ಶೆಟ್ಟಿ, ಅಭಿಷೇಕ, ಹರ್ಷ, ಪ್ರಜನ್, ಅಭೀಷ್, ಮುತ್ತುರಾಜ, ವೈಭವ ಶೆಣೈ, ನಿತಿನ್ ಅಂಚನ್, ಸುನೀಲ ಇನ್ನಿತರರಿದ್ದರು.
ಉಮೇಶ ಕೋಟ್ಯಾನ ಕಾರ್ಯಕ್ರಮ ನಿರ್ವಹಿಸಿದರು.