ಬೆದ್ರ ಉತ್ಸವಕ್ಕೆ ಸಂಸದ ಬ್ರಿಜೇಶ್ ಚೌಟ ಚಾಲನೆ ನೀಡಿದರು. ಎಂ.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಕಟಪಾಡಿ ದ್ವಾರಕಮಯಿ ಮಠದ ಸಾಯಿ ಈಶ್ವರ ಗುರೂಜಿ, ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಮೊದಲಾದವರಿದ್ದರು. 
ಉಡುಪಿ

ಬೆದ್ರ ಉತ್ಸವದಿಂದ ಊರಿನ ಹಿರಿಮೆ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕರಾವಳಿ ಕರ್ನಾಟಕದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮವೂ ಉತ್ಸವದ ಸ್ವರೂಪ ಪಡೆದುಕೊಳ್ಳುವುದು ವಿಶೇಷತೆ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಕೈಜೋಡಿಸುವ ಗುಣ ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಪರಂಪರೆಯಾಗಿದೆ. ಊರಿನ ಹಬ್ಬವನ್ನು ಒಟ್ಟಾಗಿ ಆಚರಿಸುವ ಸಂಕಲ್ಪ ಸ್ತುತ್ಯರ್ಹವಾಗಿದೆ. ಊರಿನ ಹಿರಿಮೆ ಹೆಚ್ಚಿಸಲು ಬೆದ್ರ ಉತ್ಸವದಂತಹ ಕಾರ್ಯಕ್ರಮಗಳು ಮಾದರಿ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಮನರಂಜನಾ ಆಟಗಳು, ಆಹಾರ ಮಳಿಗೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದ ಬೆದ್ರ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಎಂ.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಟಪಾಡಿ ದ್ವಾರಕಮಯಿ ಮಠದ ಸಾಯಿ ಈಶ್ವರ ಗುರೂಜಿ ಸಂದೇಶ ನೀಡಿ, ಬೆದ್ರ ಉತ್ಸದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿದೆ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವಾಗ ಭಗವಂತನ ಕೃಪೆ ಲಭಿಸುತ್ತದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಜವಾದ ಸಾಧನೆಯಾಗಿದೆ ಎಂದರು.
ಉತ್ಸವ ಸಮಿತಿ ಉಪಾಧ್ಯಕ್ಷ ಸುದರ್ಶನ ಎಂ., ವಿವಿಧ ಕ್ಷೇತ್ರಗಳ ಸಾಧಕರಾದ ಅಬುಅಲಾ ಪುತ್ತಿಗೆ, ಕೊರಗಪ್ಪ, ತಿಮ್ಮಯ್ಯ ಶೆಟ್ಟಿ, ಜಗದೀಶ್ ಅಧಿಕಾರಿ, ಶಾಂತಿಪ್ರಸಾದ್ ಹೆಗ್ಡೆ, ಕೃಷ್ಣರಾಜ್ ಹೆಗ್ಡೆ, ನಾರಾಯಣ ಪಿ. ಎಂ, ಶ್ರೀಪತಿ ಭಟ್, ರಂಜಿತ್ ಪೂಜಾರಿ, ಮೇಘನಾಥ್ ಶೆಟ್ಟಿ, ನಂದಕುಮಾರ್ ಕುಡ್ವ, ಸುಂದರ್ ಭೋವಿ, ಮಯೂರಕೀರ್ತಿ, ತ್ರಿವೇಣಿ ಗಣೇಶ್ ಶೆಟ್ಟಿ, ರಾಜೇಶ್ ನಾಯ್ಕ, ಆನಂದ ಪೂಜಾರಿ, ಸುರೇಶ್ ಕೋಟ್ಯಾನ್, ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.
ಬೆದ್ರ ಉತ್ಸವ ಸಮಿತಿಯ ಸಂಚಾಲಕ ಹರೀಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗಣೇಶ್ ಅಳಿಯೂರು ನಿರೂಪಿಸಿದರು.

ಬೆದ್ರ ಉತ್ಸವ ಕೇವಲ ಆಚರಣೆಯಲ್ಲ, ಅದು ಇಲ್ಲಿನ ಸಾಂಸ್ಕೃತಿಕ ಚೌಕಟ್ಟುಗಳ ಪ್ರತೀಕವಾಗಿದೆ. ಆಧುನಿಕ ಪ್ರಜ್ಞೆ ಬೆಳೆದಂತೆ ಮೂಡುಬಿದಿರೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾದರಿಯಾಗಿ ಬೆಳೆದಿದೆ. ಈ ಉತ್ಸವವು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮನಸ್ಸನ್ನು ಅರಳಿಸುವ ಕೆಲಸ ಮಾಡಲಿ. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಈ ಹಬ್ಬವನ್ನು ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ.