ಆಸಾಡಿ ಒಡ್ರ್ ಪೋಸ್ಟರನ್ನು ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಬಿಡುಗಡೆಗೊಳಿಸಿದರು. ಪ್ರಮುಖರಾದ ಭಾರತಿ ಪ್ರವೀಣ್ ಪೂಜಾರಿ ಸಾಸ್ತಾನ, ಲೀಲಾವತಿ ಗಂಗಾಧರ್, ಶ್ರೀಕಾಂತ್ ಶೆಣೈ ಕೋಟ ಇದ್ದರು.
ಕೋಟ: ಕುಂದಾಪ್ರ ಭಾಷೆ, ಬದುಕಿನ ವಿಚಾರವನ್ನು ಮುಂದಿನ ತಲೆಮಾರಿಗೆ ತಲುಪಿಸಲು ಆಸಾಡಿ ಒಡ್ರ್ ಸಹಕಾರಿಯಾಗಲಿದೆ. ಕುಂದಾಪ್ರ ಭಾಷೆ ಮತ್ತು ಬದ್ಕ್ ತನ್ನದೆ ಆದ ವಿಶಿಷ್ಟತೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದೆ. ಪಂಚವರ್ಣ ಸಂಘಟನೆ ಈ ಗ್ರಾಮೀಣ ಹಬ್ಬವನ್ನು ಮನೆ ಮನಮುಟ್ಟುವಂತೆ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಹೇಳಿದರು.
ಕೋಟದ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಪಂಚವರ್ಣ ಯುವಕ ಮಂಡಲದ ಸಹಕಾರದಲ್ಲಿ ವಿಶ್ವ ಕುಂದಾಪ್ರ ದಿನದ ಅಂಗವಾಗಿ ಆಸಾಡಿ ಒಡ್ರ್ ಕಾರ್ಯಕ್ರಮ ಆಗಸ್ಟ್ 9ರಂದು ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಜರುಗಲಿದ್ದು, ಅದರ ಪೋಸ್ಟರನ್ನು ಸೋಮವಾರ ಕೋಟದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಟೆಕ್ನೋ ಡೆಂಟಲ್ ಲ್ಯಾಬ್ ಮುಖ್ಯಸ್ಥೆ ಭಾರತಿ ಪ್ರವೀಣ್ ಪೂಜಾರಿ ಸಾಸ್ತಾನ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತಾ ಬಾಯರಿ ಉಪಸ್ಥಿತರಿದ್ದರು. ಸದಸ್ಯೆ ವೀಣಾ ಪ್ರಕಾಶ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.