ವಿಜಯವಾಣಿಸುದ್ದಿಜಾಲ ಹೆಬ್ರಿ
ರಸ್ತೆಸೇತುವೆ ಮಾಡುವುದು ಮಾತ್ರಅಭಿವೃದ್ಧಿಯಲ್ಲ,ಬಡವರಕಷ್ಟಗಳಿಗೆ ಸ್ಪಂದಿಸುವುದು ಕೂಡಅಭಿವೃದ್ಧಿ.ಅರ್ಹರಿಗೆಯೋಜನೆಗಳು ತಲುಪಬೇಕು ಎಂದುಗ್ಯಾರಂಟಿ ಯೋಜನೆ ಉಡುಪಿ ಜಿಲ್ಲಾಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ಶೆಟ್ಟಿ ಹೇಳಿದರು.
ಹೆಬ್ರಿತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿ ವತಿಯಿಂದ ನಾಡ್ಪಾಲುಗ್ರಾಪಂನಲ್ಲಿ ಗುರುವಾರ ಮೊದಲಗ್ಯಾರಂಟಿ ಅದಾಲತ್‌ನಲ್ಲಿಮಾತನಾಡಿದರು.
ಕಾಂಗ್ರೆಸ್ಪಕ್ಷ ಚುನಾವಣೆಯಲ್ಲಿ ಘೋಷಿಸಿದಪ್ರಣಾಳಿಕೆಯಂತೆ ಪಂಚ ಗ್ಯಾರಂಟಿಯೋಜನೆ ಅನುಷ್ಠಾನಗೊಳಿಸಿ ನುಡಿದಂತೆನಡೆದಿದೆ.ಕಾರ್ಕಳಕ್ಷೇತ್ರದ ಬಡವರ ಕಲ್ಯಾಣಕ್ಕೆ400 ಕೋಟಿರೂ.ಗ್ಯಾರಂಟಿಯೋಜನೆ ಮೂಲಕ ವಿನಿಯೋಗಿಸಿದೆ.ಜನಹಸಿದ ಹೊಟ್ಟೆಯಲ್ಲಿ ಬದುಕಬಾರದುಎಂಬುದು ಕಾಂಗ್ರೆಸ್ ಉದ್ದೇಶ.ಶೇ.99ಜನರಿಗೆಗ್ಯಾರಂಟಿ ಯೋಜನೆ ತಲುಪುತ್ತಿದೆಎಂದರು.
ಹೆಬ್ರಿತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿ ಅಧ್ಯಕ್ಷ ಶಂಕರ ಸೇರಿಗಾರ್ಅಧ್ಯಕ್ಷತೆ ವಹಿಸಿದ್ದರು.ಹೆಬ್ರಿತಾಪಂ ಇಒ ಪ್ರಶಾಂತ್ ರಾವ್ ಮಾತನಾಡಿದರು.ಹೆಬ್ರಿಮೆಸ್ಕಾಂನ ಕರ್ಣ,ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆಯರತಿ ಶೆಟ್ಟಿ,ಆಹಾರಇಲಾಖೆ ನಿರೀಕ್ಷಕ ಗುರುಪ್ರಸಾದ್,ಜಿಲ್ಲಾಉದ್ಯೋಗ ಇಲಾಖೆಯ ಪೃಥ್ವಿರಾಜ್,ಹೆಬ್ರಿತಾಪಂ ಸಹಾಯಕ ನಿರ್ದೇಶಕ ದಿನೇಶ್,ಹೆಬ್ರಿಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಪ್ರಾಂಶುಪಾಲ ಡಾ.ವಿದ್ಯಾಧರಹೆಗ್ಡೆ,ಹೆಬ್ರಿತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿ ಸದಸ್ಯರಾದ ಪ್ರವೀಣ್ ಸೂಡ,ಜಗದೀಶಹೇರಳೆ,ಶಶಿಕಲಾಆರ್.ಪಿ.,ವಸಂತ್,ರಾಜುಪೂಜಾರಿ ಮುಂತಾದವರು ಉಪಸ್ಥಿತರಿದ್ದರು.ಪಿಡಿಒಶೀತಲ್ ನಿರೂಪಿಸಿದರು.ಕಾರ್ಯದರ್ಶಿದೇವಕಿ ಮತ್ತು ಸಿಬ್ಬಂದಿ ವರ್ಗಸಹಕರಿಸಿದರು.
ಅಧಿಕಾರಿಗಳು ಕೈಜೋಡಿಸಿದಾಗ ಗ್ಯಾರಂಟಿ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಎಲ್ಲರಿಗೂ ತಲುಪುತ್ತದೆ. ಐಟಿಜಿಎಸ್ಟಿ ಸಮಸ್ಯೆಯಿಂದ ಕೆಲವರಿಗೆ ತೊಡಕಾಗಿದೆ. ಇನ್ನುಳಿದ ಎಲ್ಲ ಅರ್ಹರಿಗೂ ಯೋಜನೆ ತಲುಪುತ್ತಿವೆ. ಎಲ್ಲರ ಸಹಕಾರದಿಂದ ಹೆಬ್ರಿ ತಾಲೂಕಿನ ಮೊದಲು ಅದಾಲತ್ ನಾಡ್ಪಾಲಿನಲ್ಲಿ ಯಶಸ್ವಿಯಾಗಿದೆ.