ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜರುಗಿದ ಮಹಿಳಾ ಸ್ಪಂದನಾ ಸವಾವೇಶ ನಿಮ್ಮ ದೂರು ನಮ್ಮ ಪರಿಹಾರ ಕಾರ್ಯಕ್ರಮವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಪ್ರಮುಖರಾದ ಪ್ರೇವಾ ಮಂಜುನಾಥ್, ಗೀತಾಂಜಲಿ ಸುವರ್ಣ, ಶ್ರೀಲತಾ ಸುರೇಶ ಶೆಟ್ಟಿ ಮೊದಲಾದವರಿದ್ದರು.
ಮಕ್ಕಳಿಗೆ ತಾಯಿ ಮೊದಲ ಗುರುವಾಗಿ, ಮನೆ ಮೊದಲ ಪಾಠಶಾಲೆಯಾಗಬೇಕು. ತಾಯಂದಿರೇ ತಮ್ಮ ಮಕ್ಕಳನ್ನು ತಿದ್ದುವ ಮೂಲಕ ಸವಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಕಲಿಸಿದಾಗ ವಾತ್ರ ಸಮಾಜದಲ್ಲಿ ದೌರ್ಜನ್ಯ ಇಲ್ಲದಂತೆ ಮಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಉಡುಪಿ ಜಿಲ್ಲಾ ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂ ಹಾಗೂ ವಿವಿಧ ಸಂಟನೆಯ ಸಹಯೋಗದೊಂದಿಗೆ ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಮಹಿಳಾ ಸ್ಪಂದನಾ ಸಮಾವೇಶ ನಿಮ್ಮ ದೂರು ನಮ್ಮ ಪರಿಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಚೈತನ್ಯ ಸೀ ಶಕ್ತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೇಮಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಡಾ.ನಾಗಲಕ್ಷ್ಮೀ ಚೌಧರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಮಸ್ಯೆಗಳ ಅಹವಾಲುಗಳನ್ನು ಸಲ್ಲಿಸಲಾಯಿತು.
ವಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶ್ರೀಲತಾ ಸುರೇಶ ಶೆಟ್ಟಿ, ವಿಕಲ ಚೇತನಾ ಇಲಾಖೆ ಅಧಿಕಾರಿ ರತ್ನಾ, ರಾಜ್ಯ ಸ್ಟೇಟ್ ಹೋಮ್ ಅಧೀಕ್ಷಕರಾದ ಪುಷ್ಪಾರಾಣಿ, ಸಿಡಿಪಿಒ ಉಮೇಶ್ ಕೋಟ್ಯಾನ್ ಮತ್ತಿತರರಿದ್ದರು. ವಸಂತಿ ಕೊರೋಡ್ಕರ್ ಸ್ವಾಗತಿಸಿದರು. ಹೇವಾ ಜಗನ್ನಾಥ್ ಪ್ರಾರ್ಥಿಸಿದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು. ಸುಗುಣಾ ವಂದಿಸಿದರು.
ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜರುಗಿದ ಮಹಿಳಾ ಸ್ಪಂದನಾ ಸವಾವೇಶ ನಿಮ್ಮ ದೂರು ನಮ್ಮ ಪರಿಹಾರ ಕಾರ್ಯಕ್ರಮವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಪ್ರಮುಖರಾದ ಪ್ರೇವಾ ಮಂಜುನಾಥ್, ಗೀತಾಂಜಲಿ ಸುವರ್ಣ, ಶ್ರೀಲತಾ ಸುರೇಶ ಶೆಟ್ಟಿ ಮೊದಲಾದವರಿದ್ದರು.