ಅಗ್ನಿ ದುರಂತ ಸಂಭವಿಸಿದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೆಬ್ರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದರು. ರಾಧಾ, ಎಸ್.ಚಂದ್ರಶೇಖರ ಶೆಟ್ಟಿ, ಸತೀಶ್ ಕುವಾರ್ ಶೆಟ್ಟಿ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ವೆ
ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮೋಲ ಸಮೀಪದ ಕೆಂಜಿಗುಡ್ಡೆಯ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಹೆಬ್ರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು, ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಬೇರೆ ಕಟ್ಟಡ ನಿರ್ಮಿಸಬೇಕಾಗಬಹುದು ಹಾಗೂ ನಷ್ಟದ ಕುರಿತು ವಾಹಿತಿ ನೀಡಲಾಗುವುದು ಎಂದರು.
ಬೆಳ್ವೆ ಗ್ರಾಪಂ ಅಧ್ಯಕ್ಷೆ ರಾಧಾ, ಸದಸ್ಯರಾದ ಎಸ್.ಚಂದ್ರಶೇಖರ ಶೆಟ್ಟಿ ಸುರ‌್ಗೋಳಿ, ಸತೀಶ್ ಕುವಾರ್ ಶೆಟ್ಟಿ ಗುಡ್ಡೆಯಂಗಡಿ, ಪೃಥ್ವೀಜ್ ಶೆಟ್ಟಿ ಹೊನ್ಕಲ್, ಪಿಡಿಒ ಸತೀಶ ನಾಯ್ಕ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ದಯಾನಂದ ಪೂಜಾರಿ, ಹೆಂಗವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಟಿ.ರುರಾಮ ಶೆಟ್ಟಿ ತೊಂಬತ್ತು ಮೊದಲಾದವರು ಇದ್ದರು.
ಅಧಿಕಾರಿಗಳು, ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯ
ಕಟ್ಟಡದ ಒಳ ಭಾಗದಲ್ಲಿ ಸಂಗ್ರಹವಾಗಿರುವ ನ ತ್ಯಾಜ್ಯವನ್ನು ತೆರವು ಮಾಡುವಂತೆ ಹೆಬ್ರಿ ತ್ಯಾಜ್ಯ ಟಕಕ್ಕೆ ಬೆಳ್ವೆ ಗ್ರಾಪಂನಿಂದ ಹಲವು ಬಾರಿ ಮನವಿ ವಾಡಿದ್ದು, ಗ್ರಾಪಂ ಜವಾಬಂದಿಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಅಗ್ನಿ ದುರಂತದಲ್ಲಿ ಅಪಾರ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಕಟ್ಟಡ ಸಂಪೂರ್ಣ ಹಾನಿ
ಕಟ್ಟಡ ನಿಮಾಣಕ್ಕೆ ಬಳಸಿದ ಕಬ್ಬಿಣದ ಪೈಪ್‌ಗಳು, ಶೀಟ್, ಗೋಡೆ, ಪಿಠೋಪಕರಣ, ಯಂತ್ರ, ವಿದ್ಯುತ್ ಸಂಪರ್ಕ, ಅಪಾರ ಪ್ರಮಾಣದ ತ್ಯಾಜ್ಯ ಸಂಪೂರ್ಣ ಭಸ್ಮವಾಗಿದೆ.
ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕದಲ್ಲಿ ನ ತ್ಯಾಜ್ಯ ತೆರವಿಗೆ ಹೆಬ್ರಿ ತ್ಯಾಜ್ಯ ಟಕದವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದ ಭಾರಿ ನಷ್ಟವಾಗಿದೆ. ಆವರಣಗೋಡೆ ಇದಿದ್ದರಿಂದ ಬೆಂಕಿ ಹೊರ ಭಾಗಕ್ಕೆ ಹರಡದೆ ಭಾರಿ ದುರಂತ ತಪ್ಪಿದೆ.