ಉಡುಪಿ: ಭಾರತದಲ್ಲಿ ರೈಲು ಸಂಪರ್ಕ ಆರಂಭಗೊಂಡ ಶತಮಾನದ ಬಳಿಕ ಉಡುಪಿಗೆ ರೈಲ್ವೆ ಸಂಪರ್ಕಗಳ ಸೌಭಾಗ್ಯ ದೊರೆತಿದೆ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿರುವ ಉನ್ನತ ರೈಲ್ವೆ ನಿಲ್ದಾಣಗಳಂತೆಯೇ ಗುಣಮಟ್ಟ ಹೊಂದುವಲ್ಲಿ ಸಾಕಷ್ಟು ಆಶಾದಾಯಕ ಪ್ರಯತ್ನ ನಡೆದಿರುವುದು ಸಮಾಧಾನಕರ ವಿಷಯ. ಅಮೃತ ಯೋಜನೆಯಂತಹ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಘದ ಹೋರಾಟ ನಿರಂತರವಾಗಿರುತ್ತದೆ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ ಎನ್. ಶಾಂತಿ ತಿಳಿಸಿದರು.
ಉಡುಪಿಯ ಹಿಂದಿ ಪ್ರಚಾರ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಉಡುಪಿ ರೈಲ್ವೆ ಯಾತ್ರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಅಮೃತ ಯೋಜನೆಯ ಕಾಮಾಗಾರಿಯನ್ನು ತಕ್ಷಣವೇ ಆರಂಭಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗುವ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ನಿರ್ದೇಶಕರು ಮತ್ತು ಸದಸ್ಯರಾದ ಸದಾನಂದ ಅಮೀನ್, ರಾಧಾಕೃಷ್ಣ ರಾವ್, ಜಯರಾಮ ಪ್ರಭು, ರತ್ನಶ್ರೀ ಆಚಾರ್ಯ, ಹೇಮನಾಥ ಹೆಗ್ದೆ, ಪಿ.ಎನ್. ರವೀಂದ್ರ, ಅಪ್ರಾಯ ಶೆಟ್ಟಿಗಾರ, ಮಹಮ್ಮದ್ ಮೌಲಾ, ಶ್ರೀನಿವಾಸ ಶೆಟ್ಟಿ ತೋನ್ಸೆ, ರವೀಶ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ತಿಲಕನಾಥ ಮಂಜೇಶ್ವರ, ಐವಾನ್ ಡಿಸೋಜ, ನಾರಾಯಣ ಕಾಂಚನ್ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಮಂಜುನಾಥ ಮಣಿಪಾಲ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಯು. ಅಜಿತಕುಮಾರ ಶೆಣೈ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಜನಾರ್ದನ ಕೋಟ್ಯಾನ್ ಸ್ವಾಗತಿಸಿದರು. ಜಾನ್ ರೆಬೆಲ್ಲೊ ವಂದಿಸಿದರು. ಪ್ರಭಾಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.