ಎಸ್‌ಐಆರ್ ತರಬೇತಿ ಕಾರ್ಯಕ್ರಮದಲ್ಲಿ ಅಮಿತಾ ಉಳ್ಳಾಲ ಮಾತನಾಡಿದರು. ಶಾಸಕ ಅಶೋಕ್ ರೈ, ಯು.ಟಿ.ತೌಸೀಫ್, ಡಾ.ರಾಜಾರಾಂ ಕೆ.ಬಿ. ಇತರರು ಇದ್ದರು.  
ಉಡುಪಿ

ಎಸ್‌ಐಆರ್ ಪ್ರಕ್ರಿಯೆ ಪ್ರತಿಯೊಬ್ಬರಿಗೂ ನಿರ್ಣಾಯಕ

ಉಪ್ಪಿನಂಗಡಿ: ಚುನಾವಣಾ ಆಯೋಗದಿಂದ ರಾಜ್ಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಇದು ಪ್ರತಿಯೊಬ್ಬರ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಎಲ್ಲಿಯಾದರೂ ನೀವು ಮತದಾನದ ಹಕ್ಕನ್ನು ಕಳೆದುಕೊಂಡಲ್ಲಿ ಮುಂದೆ ಎಲ್ಲ ಸವಲತ್ತುಗಳನ್ನು ಕಳೆದುಕೊಳ್ಳಲಿದ್ದೀರಿ ಎಂದು ಶಾಸಕ ಅಶೋಕ್ ಕುವಾರ್ ರೈ ಎಚ್ಚರಿಸಿದರು.
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರೋಟರಿ ಭವನದಲ್ಲಿ ಎಸ್‌ಐಆರ್ ತರಬೇತಿ ಕಾರ್ಯಕ್ರಮದಲ್ಲಿ ವಾತನಾಡಿದರು.
ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ತಾತ್ಸಾರ ವಾಡಬೇಡಿ. ಮನೆಗೆ ಬರುವ ಬಿಎಲ್‌ಒಗಳಿಗೆ ಸರಿಯಾದ ವಾಹಿತಿ ನೀಡಿ. ಮತದಾನದ ಹಕ್ಕು ನಮಗೆ ಬದುಕುವ ಹಕ್ಕನ್ನು ನೀಡುತ್ತದೆ. ಪ್ರತಿಯೊಬ್ಬರೂ ತಪ್ಪದೆ ಭಾಗವಹಿಸಬೇಕು ಎಂದು ಶಾಸಕರು ಹೇಳಿದರು.
ಅಮಿತಾ ಉಳ್ಳಾಲ ಅವರು ಎಸ್‌ಐಆರ್ ಬಗ್ಗೆ ತರಬೇತಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀದರ್ ರೈ ಮಠಂತಬೆಟ್ಟು, ಅಲ್ಪಸಂಖ್ಯಾತ ಜಿಲ್ಲಾ ಟಕ ಕೋಶಾಧಿಕಾರಿ ನಝೀರ್ ಮಠ ಉಪಸ್ಥಿತರಿದ್ದರು.