ನೆರಿಯ ಗ್ರಾಮದಲ್ಲಿ ಕಂಡುಬಂದ ಶಂಖಹುಳು. 
ಉಡುಪಿ

ನೆರಿಯಕ್ಕೂ ಕಾಲಿಟ್ಟ ಶಂಖಹುಳುಗಳ ಕಾಟ

ಬೆಳ್ತಂಗಡಿ: ಉಜಿರೆ ಗ್ರಾಮದ ಅತ್ತಾಜೆ ಪರಿಸರದ ತೋಟಗಳಲ್ಲಿ ಕಂಡುಬಂದಿದ್ದ ಶಂಖಹುಳುಗಳು ಇದೀಗ ನೆರಿಯ ಗ್ರಾಮದ ತೋಟಗಳಿಗೂ ಕಾಲಿಟ್ಟಿವೆ.
ನೆರಿಯ ಗ್ರಾಮದ ದೇವಗಿರಿಯ ಜೋಸೆಫ್ ಎಂಬುವರ ತೋಟದಲ್ಲಿ ಅಪಾರ ಪ್ರಮಾಣದ ಶಂಖಹುಳುಗಳು ಕಂಡುಬಂದಿದ್ದು ತಮ್ಮ ವ್ಯಾಪ್ತಿಯನ್ನು ಸಮೀಪದ ತೋಟಗಳಿಗೂ ವಿಸ್ತರಿಸುತ್ತಿವೆ. ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಕೃಷಿಕರು ಶಂಖಹುಳುಗಳ ಕಾಟದಿಂದ ಬೇಸತ್ತಿದ್ದಾರೆ.
ಉಪ್ಪು ನೀರು ಸಿಂಪಡಿಸುವುದು, ಸೆಗಣಿಯಲ್ಲಿ ಅದ್ದಿದ ಗೋಣಿಚೀಲಗಳನ್ನು ಕಲ್ಲಿನ ಮೇಲೆ ಜೋಡಿಸಿ ಅದರ ಮೇಲೆ ಹತ್ತಿ ಬರುವ ಶಂಖ ಹುಳುಗಳನ್ನು ಸಂಗ್ರಹಿಸಿ ನಿಯಂತ್ರಿಸಬಹುದು. ಈ ಕ್ರಮವನ್ನು ಸಣ್ಣ ತೋಟಗಳಲ್ಲಿ ಅನುಸರಿಸಬಹುದೇ ಹೊರತು ದೊಡ್ಡ ವಿಸ್ತೀರ್ಣದ ತೋಟಗಳಲ್ಲಿ ಮಾಡುವುದು ಕಷ್ಟಸಾಧ್ಯ.

ಶಂಖಹುಳುಗಳ ಸಂಖ್ಯೆ ವೇಗವಾಗಿ ವೃದ್ಧಿಸುತ್ತವೆ. ಅಲ್ಲದೆ ಇವು ಕೃಷಿಯನ್ನು ಬಹಳ ಬೇಗ ನಾಶ ಮಾಡುತ್ತವೆ. ಬಾತುಕೋಳಿಗಳನ್ನು ಸಾಕಿ ಅವುಗಳನ್ನು ತೋಟ ಪ್ರದೇಶಕ್ಕೆ ಬಿಟ್ಟರೆ ಇದರಿಂದ ಶಂಖಹುಳುಗಳ ನಿಯಂತ್ರಣ ಸಾಧ್ಯವಿದೆ.

— ಅರುಣ್ ಎಸ್.ಮೆಹೆಂದಳೆ, ಅಳದಂಗಡಿ ಕೃಷಿಕ